ಕನ್ನಡ ಸುದ್ದಿ  /  Video Gallery  /  Stampede After Fans Clash At Football Game In Indonesia That Killed 129

Indonesia football match: ನೂರಾರು ಜನರ ಬಲಿ ಪಡೆದ ಫುಟ್​ಬಾಲ್​ ಮ್ಯಾಚ್.. ವಿಡಿಯೋ ನೋಡಿ

Oct 02, 2022 12:03 PM IST Meghana B
twitter
Oct 02, 2022 12:03 PM IST
  • ಫುಟ್​ಬಾಲ್ ಪಂದ್ಯ ಸೋತಿತು ಎಂಬ ಕಾರಣಕ್ಕೆ ಇಂಡೋನೇಷ್ಯಾದಲ್ಲಿ ನಡೆದ ಹಿಂಸಾಚಾರದಲ್ಲಿ 129 ಮಂದಿ ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೂರ್ವ ಜಾವಾದ ಕಂಜುರುಹಾನ್ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ. ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವೆ ಪಂದ್ಯ ನಡೆದಿತ್ತು. ಅರೆಮಾ ಎಫ್‌ಸಿ ತಂಡ ಸೋತಿದೆ. ಇದರಿಂದ ರೊಚ್ಚಿಗೆದ್ದ ಸಾವಿರಾರು ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡು, ಮೈದಾನಕ್ಕೂ ನುಗ್ಗಿ ದಾಂಧಲೆ ಮಾಡಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಹಲ್ಲೆ, ಕಾಲ್ತುಳಿದಿಂದ ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಇಬ್ಬರು ಪೊಲೀಸರೂ ಸೇರಿದ್ದಾರೆ.
More