Tamilnadu Rain :ತಮಿಳುನಾಡಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆ ;5 ಜಿಲ್ಲೆಗಳಲ್ಲಿ ರಜೆ ಘೋಷಣೆ, ಜನರ ಪರದಾಟ
ತಮಿಳುನಾಡಿನ ದಕ್ಷಿಣ ಜಿಲ್ಲೆಗಳಾದ ತಿರುನೆಲ್ವೇಲಿ, ತೆಂಕಾಸಿ, ತೂತುಕುಡಿ, ಕನ್ಯಾಕುಮಾರಿ, ವಿರುಧುನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಬಹುತೇಕ ಕಡೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಭಾಗದಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಮಳೆ ಇರುವ ಕಡೆಗೆ ಸರ್ಕಾರಿ ಕಚೇರಿಗಳನ್ನೂ ಬಂದ್ ಮಾಡಲಾಗಿದೆ. ತಿರುನೆಲ್ವೇಲಿ, ಕನ್ಯಾಕುಮಾರಿ, ತೆಂಕಾಸಿ, ತೂತುಕ್ಕುಡಿ ಭಾಗದಲ್ಲಿ ಹಲವು ಕಡೆಗಳಲ್ಲಿ ಭಾನುವಾರವೇ ಎಡಬಿಡದೇ ಸುರಿದ ಮಳೆಯಿಂದ ಪ್ರವಾಹ ವಾತಾವರಣ ಸ್ಥಿತಿ ನಿರ್ಮಾಣವಾಗಿತ್ತು. ನೀರಿನಲ್ಲಿ ಸಿಲುಕಿದ್ದ ಹಲವರನ್ನು ರಕ್ಷಣಾ ಪಡೆಗಳು ರಕ್ಷಿಸುವ ಕಾರ್ಯ ನಡೆಸಿದವು. ಮಳೆ ಸೋಮವಾರವೂ ಆಗುವ ಮುನ್ಸೂಚನೆ ಕಾರಣಕ್ಕೆ ಸ್ಥಳೀಯ ಜಿಲ್ಲಾಡಳಿತಗಳ ರಜೆ ಘೋಷಿಸುವ ಜತೆಗೆ ರಕ್ಷಣಾ ಕಾರ್ಯಕ್ಕೆ ಮುಂದಾದವು.