ತೆಲಂಗಾಣದ ಜೈನೂರಿನಲ್ಲಿ ಆದಿವಾಸಿ ಮಹಿಳೆ ಮೇಲೆ ಅತ್ಯಾಚಾರ ಯತ್ನ; ಭುಗಿಲೆದ್ದ ಗಲಾಟೆ, ವಾಹನಗಳು ಜಖಂ, ಕಲ್ಲುತೂರಾಟ VIDEO
- ಕೊಲ್ಕತ್ತಾದ ವೈದ್ಯೆಯ ರೇಪ್ ಕೇಸ್ ಮಾಸುವ ಮೊದಲೇ ತೆಲಂಗಾಣದಲ್ಲಿ ಮತ್ತೊಂದು ರೇಪ್ ಕೇಸ್ ವರದಿಯಾಗಿದೆ. ಆಸಿಫಾ ಬಾದ್ ಜಿಲ್ಲೆಯ ಜೈನೂರಿನಲ್ಲಿ ಆದಿವಾಸಿ ಮಹಿಳೆಯ ಮೇಲೆ ಆಟೋಚಾಲಕನೊರ್ವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದಾಗಿ ಜೈನೂರಿನಲ್ಲಿ ಹಿಂಸಾಚಾರ ನಡೆದಿದ್ದು, ಗುಂಪುಗಳ ನಡುವೆ ಗಲಾಟೆ ನಡೆದಿದೆ. ಮನೆಗಳು, ವಾಹನಗಳ ಮೇಲೆ ಕಲ್ಲುತೂರಾಟ ನಡೆದಿದ್ದು, ಭಾರೀ ಅನಾಹುತಗಳು ಸಂಭವಿಸಿವೆ. ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿಯಲ್ಲಿ ಪೊಲೀಸರ ಕಣ್ಗಾವಲು ಹಾಕಲಾಗಿದೆ.