ವಯನಾಡಿನ ಮುಂಡಕೈನಲ್ಲಿ ಭೀಕರ ಗುಡ್ಡ ಕುಸಿತ; ಕ್ಷಣದಲ್ಲೇ 100 ಮಂದಿ ಸಾವು -Wayanad land Sliding
- ಕೇರಳದ ವಯನಾಡಿನ ಮಂಡಕೈನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣದಲ್ಲಿ ಆರಂಭದಲ್ಲೇ ನೂರು ಮಂದಿ ಬಲಿಯಾಗಿದ್ದಾರೆ. ಕ್ಷಣಾರ್ಧದಲ್ಲಿ ಸಂಭವಿಸಿದ ಈ ಭೀಕರ ದುರಂತ ದೇಶದ ಇತಿಹಾಸದಲ್ಲೇ ಘನ ಘೋರವಾದ ಭೂಕುಸಿತವಾಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ವಿಪರೀತ ಅರಣ್ಯ ನಾಶ ಮಾಡಿ ರೆಸಾರ್ಟ್‌ಗಳ ನಿರ್ಮಾಣ, ರಬ್ಬರ್ ತೋಟಗಳ ನಿರ್ಮಾಣವೇ ಇದಕ್ಕೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದು ತುರ್ತು ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ಮತ್ತು ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಹಂತ ಹಂತವಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.