ತುಳುನಾಡ ಯುವಕನಿಗೆ ಥೈಲ್ಯಾಂಡ್ ಯುವತಿ ಮೇಲೆ ಮೊದಲ ನೋಟದ ಪ್ರೇಮ, ಎರಡೆರಡು ಬಾರಿ ವಿವಾಹವಾದ ಜೋಡಿ, ಇಲ್ಲಿದೆ ವೈರಲ್ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ತುಳುನಾಡ ಯುವಕನಿಗೆ ಥೈಲ್ಯಾಂಡ್ ಯುವತಿ ಮೇಲೆ ಮೊದಲ ನೋಟದ ಪ್ರೇಮ, ಎರಡೆರಡು ಬಾರಿ ವಿವಾಹವಾದ ಜೋಡಿ, ಇಲ್ಲಿದೆ ವೈರಲ್ ವಿಡಿಯೋ

ತುಳುನಾಡ ಯುವಕನಿಗೆ ಥೈಲ್ಯಾಂಡ್ ಯುವತಿ ಮೇಲೆ ಮೊದಲ ನೋಟದ ಪ್ರೇಮ, ಎರಡೆರಡು ಬಾರಿ ವಿವಾಹವಾದ ಜೋಡಿ, ಇಲ್ಲಿದೆ ವೈರಲ್ ವಿಡಿಯೋ

Dec 06, 2024 06:27 PM IST Umesh Kumar S
twitter
Dec 06, 2024 06:27 PM IST

ಮಂಗಳೂರು: ಇದು ಥೈಲ್ಯಾಂಡ್‌ನಲ್ಲಿ ಅರಳಿದ ಪ್ರೇಮಕಥೆ. ತುಳುನಾಡ ಯುವಕನಿಗೆ ಥೈಲ್ಯಾಂಡ್ ಯುವತಿ ಮೇಲೆ ಮೊದಲ ನೋಟದ ಪ್ರೇಮ, ಎರಡೆರಡು ಬಾರಿ ವಿವಾಹವಾದ ಜೋಡಿ ಮೇಲೆ ಎಲ್ಲರ ಗಮನ ನೆಟ್ಟಿದೆ. ಜುಲೈನಲ್ಲಿ ಥೈಲ್ಯಾಂಡ್‌ನಲ್ಲಿ ವಿವಾಹವಾಗಿದ್ದ ಜೋಡಿ, ನಿನ್ನೆ (ಡಿಸೆಂಬರ್ 5) ಮಂಗಳೂರಿನಲ್ಲಿ ಮತ್ತೊಮ್ಮೆ ಸಪ್ತಪದಿ ತುಳಿದು ದಾಂಪತ್ಯ ಜೀವನ ಪ್ರವೇಶಿಸಿದೆ. ಮಂಗಳೂರಿನ ಪೃಥ್ವಿರಾಜ್‌ ಎಸ್.ಅಮೀನ್ ಹಾಗೂ ಥೈಲ್ಯಾಂಡ್‌ನ ಮೊಂತಕನ್ ಸಸೂಕ್ ಜೋಡಿಯೇ ಈ ರೀತಿ ಗಮನಸೆಳೆದಿರುವುದು. ವಕೀಲೆ ಸುಜಯಾ ಸತೀಶ್ ಹಾಗೂ ಸತೀಶ್ ಕುಮಾರ್ ಅವರ ಪುತ್ರ ಪೃಥ್ವಿರಾಜ್. ಅವರು ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್‌ವೇ‌ರ್ ಕಂಪೆನಿ ಹೊಂದಿದ್ದು, ಪ್ರಾಜೆಕ್ಟ್ ಕೆಲಸದ ಮೇಲೆ ಥೈಲ್ಯಾಂಡ್‌ಗೆ ಹೋಗಿದ್ದ ವೇಳೆ ಪ್ರೇಮಿಗಳ ದಿನವೇ ಮೊಂತಕಾನ್ ಸಸೂಕ್ ಪರಿಚಯವಾಗುತ್ತಾರೆ. ಅವರನ್ನು ನೋಡಿದ್ದೇ ಪೃಥ್ವಿರಾಜ್‌ಗೆ ಪ್ರೀತಿ ಚಿಗುರೊಡೆದಿದೆ. ಕೂಡಲೇ ಪ್ರೇಮ ನಿವೇದನೆ ಮಾಡಿದ್ದಾರೆ. ಮೊಂತಕಾನ್ ಕೂಡಾ ಇವರ ಪ್ರೀತಿಯನ್ನು ಒಪ್ಪಿದ ಕಾರಣ ಪ್ರೀತಿ ಬಲವಾಗಿ, ದಾಂಪತ್ಯ ಜೀವನದ ತನಕ ಮುಂದುವರಿದಿದೆ. ಇದೀಗ ಭಾರತೀಯ ಪದ್ಧತಿ ಪ್ರಕಾರ ಗುರುವಾರ ಶ್ರೀಮಂಗಳಾದೇವಿ ದೇವಸ್ಥಾನದಲಿ ಗುರು-ಹಿರಿಯರ ಡಿ.7ರಂದು ಅಡ್ಯಾ‌ರ್ ಗಾರ್ಡನ್‌ನಲ್ಲಿ ಅದ್ದೂರಿ ರಿಸೆಪ್ಪನ್ ನಡೆಯಲಿದೆ. ಇನ್ನು ಮುಂದೆ ಮೊಂತಕಾನ್ ಥೈಲ್ಯಾಂಡ್ ತೊರೆದು ಭಾರತೀಯ ಸೊಸೆಯಾಗಲಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ನೂರ್ಕಾಲ ಸುಖವಾಗಿ ದಾಂಪತ್ಯ ಜೀವನ ನಡೆಸಲಿ ಎಂಬುದೇ ನಮ್ಮ ಆಶಯ. ವಿಡಿಯೋ ನೋಡಿ.

More