Tumkur News: ತುಮಕೂರು ಬಸ್‌ನಲ್ಲಿ ಸೀಟಿಗಾಗಿ ಮುಂದೆಲೆ ಹಿಡಿದು ಜಗಳವಾಡಿದ ವನಿತೆಯರು: ಬಿಡಿಸಲು ಬಂದವರನ್ನೂ ಬೈದು ಕಳಿಸಿದ್ರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Tumkur News: ತುಮಕೂರು ಬಸ್‌ನಲ್ಲಿ ಸೀಟಿಗಾಗಿ ಮುಂದೆಲೆ ಹಿಡಿದು ಜಗಳವಾಡಿದ ವನಿತೆಯರು: ಬಿಡಿಸಲು ಬಂದವರನ್ನೂ ಬೈದು ಕಳಿಸಿದ್ರು

Tumkur News: ತುಮಕೂರು ಬಸ್‌ನಲ್ಲಿ ಸೀಟಿಗಾಗಿ ಮುಂದೆಲೆ ಹಿಡಿದು ಜಗಳವಾಡಿದ ವನಿತೆಯರು: ಬಿಡಿಸಲು ಬಂದವರನ್ನೂ ಬೈದು ಕಳಿಸಿದ್ರು

Published Jul 24, 2023 06:48 PM IST HT Kannada Desk
twitter
Published Jul 24, 2023 06:48 PM IST

ಶಕ್ತಿ ಯೋಜನೆ ಆರಂಭವಾದಾಗಿನಿಂದ ರಾಜ್ಯದ ನಾನಾ ಕಡೆ ಬಸ್‌ನಲ್ಲಿ ಸೀಟಿಗಾಗಿ ಜಗಳ ಹಾಗೂ ಇನ್ನಿತರ ಘಟನೆಗಳು ನಡೆಯುತ್ತಲೇ ಇದೆ. ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಬಸ್‌ ಹತ್ತಲು ಹೋದ ಮಹಿಳೆ ಕೈ ಕಳೆದುಕೊಂಡಿದ್ದರು. ಈಗ ತುಮಕೂರಿನಲ್ಲಿ ಇಬ್ಬರು ಮಹಿಳೆಯರು ಸೀಟಿಗಾಗಿ ಜಡೆ ಹಿಡಿದು ಜಗಳವಾಡಿರುವ ವಿಡಿಯೋ ವೈರಲ್‌ ಆಗುತ್ತಿದೆ. ವಾಶ್‌ ರೂಮ್‌ಗೆ ಹೋದಾಗ ಮತ್ತೊಬ್ಬ ಮಹಿಳೆ ಬಂದು ಆ ಸೀಟಿನಲ್ಲಿ ಕೂತಿದ್ದಾರೆ. ಆಕೆ ವಾಪಸ್‌ ಬರುತ್ತಿದ್ದಂತೆ ಮೇಲೆ ಏಳಲು ಹೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾದ ವಿವಾದ ನಡೆದು ಅದು ಜಗಳಕ್ಕೆ ತಿರುಗಿದೆ. ಬಸ್‌ನಲ್ಲಿದ್ದವರು ಇದನ್ನು ರೆಕಾರ್ಡ್‌ ಮಾಡಿ ಅಪ್‌ಲೋಡ್‌ ಮಾಡಿದ್ದಾರೆ. ಜಗಳ ಬಿಡಿಸಲು ಹೋದವರನ್ನೂ ಒಬ್ಬಾಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಳಿಸಿದ್ದಾರೆ.

More