ತುಮಕೂರು: ಚಿರತೆ ಬಾಲ ಹಿಡಿದು ಬಲೆಗೆ ಹಾಕಲು ಸಹಾಯ ಮಾಡಿದ ಯುವಕ, ವಿಡಿಯೋ ವೈರಲ್
ತುಮಕೂರು: ಯುವಕನೊಬ್ಬ ಚಿರತೆಯ ಬಾಲ ಹಿಡಿದು, ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಹಾಯ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿತ್ತು, ಇತ್ತೀಚೆಗೆ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಗ್ರಾಮಸ್ಥರು, ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸಿಬ್ಬಂದಿ,ಚಿರತೆ ಹಿಡಿಯಲ ಅಗತ್ಯ ವಸ್ತುಗಳೊಂದಿಗೆ ಬಂದಿದ್ದಾರೆ. ಬಲೆ ಬೀಸಿದರೂ ಚಿರತೆ ತಪ್ಪಿಸಿಕೊಳ್ಳಲು ಯತ್ನಿಸಿದೆ,ಅಲ್ಲೇ ಇದ್ದ ಆನಂದ್ ಎಂಬ ಯುವಕ ಓಡಿಹೋಗುತ್ತಿದ್ದ ಚಿರತೆ ಬಾಲ ಹಿಡಿದು ಬಲೆಗೆ ಹಾಕಲು ಸಹಾಯ ಮಾಡಿದ್ದಾನೆ. ಯುವಕನ ಈ ಸಾಹಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಶ್ಲಾಘಿಸಿದ್ದು, ವಿಡಿಯೋ ವೈರಲ್ ಆಗುತ್ತಿದೆ.