V Senthil Balaji : ಅಕ್ರಮ ಹಣಕಾಸು ವರ್ಗಾವಣೆ ಕೇಸ್ ನಲ್ಲಿ ಡಿಎಂಕೆ ಸರ್ಕಾರದ ಸಚಿವ ED ವಶಕ್ಕೆ ; ಕಾರಿನೊಳಗೆ ಬಿಕ್ಕಿ ಬಿಕ್ಕಿ ಅತ್ತ ಸಚಿವ
- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಮಿಳುನಾಡಿನ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ವಿದ್ಯುತ್, ನಿಷೇಧ ಮತ್ತು ಅಬಕಾರಿ ಸಚಿವರಾಗಿರುವ ವಿ. ಸೆಂಥಿಲ್ ಬಾಲಾಜಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. 2011-15ರಲ್ಲಿ ದಿವಂಗತ ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದಲ್ಲಿ ಸೆಂಥಿಲ್ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಈ ವೇಳೆ ಸಾರಿಗೆ ನಿಗಮಗಳಲ್ಲಿ ನೇಮಕ ಮಾಡುವುದಾಗಿ ವಿವಿಧ ವ್ಯಕ್ತಿಗಳಿಂದ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಈ ಬಗ್ಗೆ ಎಫ್ ಐ ಆರ್ ಕೂಡ ದಾಖಲಾಗಿದ್ದು ಅವರನ್ನ ವಶಕ್ಕೆ ಪಡೆಯಲು ಕೋರ್ಟ್ ಅನುಮತಿಸಿದೆ.