ವಂದೇ ಭಾರತ್ ರೈಲು ಚಲಾಯಿಸಿ ಗಮನಸೆಳೆದ ಮೊದಲ ಆದಿವಾಸಿ ಮಹಿಳಾ ಲೋಕೋ ಪೈಲಟ್ ರಿತಿಕಾ ತಿರ್ಕಿ ಯಾರು - ವೈರಲ್ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಂದೇ ಭಾರತ್ ರೈಲು ಚಲಾಯಿಸಿ ಗಮನಸೆಳೆದ ಮೊದಲ ಆದಿವಾಸಿ ಮಹಿಳಾ ಲೋಕೋ ಪೈಲಟ್ ರಿತಿಕಾ ತಿರ್ಕಿ ಯಾರು - ವೈರಲ್ ವಿಡಿಯೋ

ವಂದೇ ಭಾರತ್ ರೈಲು ಚಲಾಯಿಸಿ ಗಮನಸೆಳೆದ ಮೊದಲ ಆದಿವಾಸಿ ಮಹಿಳಾ ಲೋಕೋ ಪೈಲಟ್ ರಿತಿಕಾ ತಿರ್ಕಿ ಯಾರು - ವೈರಲ್ ವಿಡಿಯೋ

Sep 20, 2024 05:46 PM IST Umesh Kumar S
twitter
Sep 20, 2024 05:46 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಟಾಟಾನಗರ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಉದ್ಘಾಟಿಸಿದ್ದರು. ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್, ಜಾರ್ಖಂಡ್‌ನ ಬುಡಕಟ್ಟು ಸಮುದಾಯದ 27 ವರ್ಷದ ರಿತಿಕಾ ತಿರ್ಕಿ ಈಗ ಸುದ್ದಿಯ ಕೇಂದ್ರ ಬಿಂದು.

ಜಾರ್ಖಂಡ್ ಬಿಜೆಪಿ ನಾಯಕ ಚಂಪೈ ಸೊರೆನ್ ಕೂಡ ರಿತಿಕಾ ಅವರ ವಿಡಿಯೋವನ್ನು ಶೇರ್ ಮಾಡಿ ಪ್ರಶಂಸಿದ್ದಾರೆ. 

ಜಾರ್ಖಂಡ್‌ನ ಸಣ್ಣ ಬುಡಕಟ್ಟು ಹಳ್ಳಿಯಿಂದ ಬಂದವರು ರಿತಿಕಾ. ರಿತಿಕಾ ತಿರ್ಕಿ ಕುಟುಂಬದಲ್ಲಿ ಅವರ ಪೋಷಕರು ಮತ್ತು ಅವರ ನಾಲ್ವರು ಒಡಹುಟ್ಟಿದವರಿದ್ದಾರೆ. ರಿತಿಕಾ ತನ್ನ ಶಾಲಾ ಶಿಕ್ಷಣವನ್ನು ರಾಂಚಿಯಲ್ಲಿ ಮುಗಿಸಿದ್ದು, ನಂತರ ಬಿಐಟಿ ಮೆಸ್ರಾದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು. ಅದಾಗಿ, ಭಾರತೀಯ ರೈಲ್ವೆಯಲ್ಲಿ ವೃತ್ತಿಜೀವನ ಶುರು ಮಾಡಿದರು.

ರಿತಿಕಾ ತಿರ್ಕಿ ಅವರು 2019 ರಲ್ಲಿ ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದಲ್ಲಿ ಷಂಟರ್ ಆಗಿ ರೈಲ್ವೆ ವೃತ್ತಿ ಬದುಕು ಪ್ರಾರಂಭಿಸಿದರು. ನಂತರ ಸರಕು ಮತ್ತು ಪ್ರಯಾಣಿಕ ರೈಲುಗಳನ್ನು ಓಡಿಸಿದರು. ಹಿರಿಯ ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಬಡ್ತಿ ಪಡೆದ ನಂತರ, ರಿತಿಕಾ ಈಗ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯಲ್ಲಿ ಸಹಾಯ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅವರು ವಂದೇ ಭಾರತ್ ಓಡಿಸುವ ವಿಡಿಯೋ ನೀವೂ ನೋಡಿ.

More