ಆರ್ಡರ್ ಮಾಡಿದ್ದು ವೆಜ್ ಬಿರಿಯಾನಿ, ಬಂದಿದ್ದು ನಾನ್‌ವೆಜ್ ಬಿರಿಯಾನಿ; ತಿಂದು ಕಣ್ಣೀರು ಹಾಕಿದ ಯುವತಿ; ವಿಡಿಯೊ ವೈರಲ್
- ಉತ್ತರ ಪ್ರದೇಶದ ನೊಯ್ಡಾದಲ್ಲಿ ಯುವತಿಯೊಬ್ಬರು ಆನ್‌ಲೈನ್‌ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ರೆಸ್ಟೋರೆಂಟ್‌ನವರು ಎಡವಟ್ಟು ಮಾಡಿ ಚಿಕನ್ ಬಿರಿಯಾನಿ ಕಳಿಸಿರುವ ಘಟನೆ ನಡೆದಿದೆ. ಎಪ್ರಿಲ್ 4ರಂದು ಈ ಘಟನೆ ನಡೆದಿದ್ದು ರೆಸ್ಟೋರೆಂಟ್‌ನಿಂದ ನಾನ್ ವೆಜ್ ಬಿರಿಯಾನಿ ಬಂದಿದೆ. ಆದರೆ ಪಕ್ಕಾ ವೆಜಿಟೇರಿಯನ್ ಆಗಿದ್ದ ಯುವತಿ ಗೊತ್ತಿಲ್ಲದೆ ಎರಡು ತುತ್ತು ತಿಂದಿದ್ದಾರೆ. ಬಳಿಕ ಅದು ಚಿಕನ್ ಬಿರಿಯಾನಿ ಎಂದು ತಿಳಿದು ಬಂದಿದ್ದು ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಬಂದಿರುವುದಾಗಿ ಆಕೆ ಕಣ್ಣೀರು ಹಾಕಿದ್ದಾರೆ. ಈ ವಿಡಿಯೊ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಪೊಲೀಸರು ರೆಸ್ಟೋರೆಂಟ್ ಮಾಲೀಕನ ವಿರುದ್ಧ ಕ್ರಮ ಜರುಗಿಸಿದ್ದಾರೆ.