ಕನ್ನಡ ಸುದ್ದಿ  /  Video Gallery  /  Watch: Karnataka Home Minister Wears Boot With The Support Of Gandhiji Photo

Watch: ಬೂಟು ಹಾಕಿಕೊಳ್ಳಲು ಗಾಂಧೀಜಿ ಫೋಟೋ ಬೆಂಬಲ ಪಡೆದ ಗೃಹ ಸಚಿವರು

Aug 16, 2022 07:27 PM IST Meghana B
twitter
Aug 16, 2022 07:27 PM IST
  • ತುಮಕೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೂಟು ಹಾಕಿಕೊಳ್ಳಲು ಗಾಂಧೀಜಿ ಫೋಟೋ ಬೆಂಬಲ ಪಡೆದ ವಿಡಿಯೋವೊಂದು ವೈರಲ್​ ಆಗಿದೆ. ನಿನ್ನೆ ತುಮಕೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಫೋಟೋಗೆ ನಮಸ್ಕರಿಸಿದ ಗೃಹ ಸಚಿವರು ಬಳಿಕ ಒಂದು ಕೈಯಲ್ಲಿ ಗಾಂಧೀಜಿ ಫೋಟೋ ಬೆಂಬಲ ಪಡೆದು ಮತ್ತೊಂದು ಕೈಯಲ್ಲಿ ಬೂಟು ಹಾಕಿಕೊಂಡಿದ್ದಾರೆ. ಈ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಶೇರ್​ ಮಾಡಿದ್ದು, ಗೃಹ ಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ? ಕಾನೂನು ಸುವ್ಯವಸ್ಥೆ ನಿರ್ವಹಿಸುವುದನ್ನೂ ತಿಳಿಯದ, ಮಹನೀಯರಿಗೆ ಗೌರವಿಸುವುದನ್ನೂ ಅರಿಯದ ಸಚಿವರು ದೇಶಭಕ್ತಿಯ ಬಗ್ಗೆ ಭಾಷಣ ಬಿಗಿಯುವುದು ಹಾಸ್ಯಾಸ್ಪದ ಎಂದು ಹೇಳಿದೆ.
More