ಕನ್ನಡದ ನಟನಿಗೆ ಕಪಾಳಮೋಕ್ಷ ಮಾಡಿದ ತೆಲುಗು ಮಹಿಳೆ! ಆಕೆಯ ಕೋಪಕ್ಕೆ ಕಾರಣವಾಯ್ತು ಚಿತ್ರದಲ್ಲಿನ ವಿಲನ್ ರೋಲ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕನ್ನಡದ ನಟನಿಗೆ ಕಪಾಳಮೋಕ್ಷ ಮಾಡಿದ ತೆಲುಗು ಮಹಿಳೆ! ಆಕೆಯ ಕೋಪಕ್ಕೆ ಕಾರಣವಾಯ್ತು ಚಿತ್ರದಲ್ಲಿನ ವಿಲನ್ ರೋಲ್‌

ಕನ್ನಡದ ನಟನಿಗೆ ಕಪಾಳಮೋಕ್ಷ ಮಾಡಿದ ತೆಲುಗು ಮಹಿಳೆ! ಆಕೆಯ ಕೋಪಕ್ಕೆ ಕಾರಣವಾಯ್ತು ಚಿತ್ರದಲ್ಲಿನ ವಿಲನ್ ರೋಲ್‌

Published Oct 26, 2024 02:37 PM IST Manjunath B Kotagunasi
twitter
Published Oct 26, 2024 02:37 PM IST

  • ಸ್ಯಾಂಡಲ್‌ವುಡ್‌ನಲ್ಲಿ ಮತ್ತು ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯಿಂದಲೇ ಗುರುತಿಸಿಕೊಂಡಿದ್ದಾರೆ ಪೋಷಕ ನಟ ಎನ್‌.ಟಿ. ರಾಮಸ್ವಾಮಿ. ಈಗ ಇದೇ ನಟ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕಳೆದ ವಾರವಷ್ಟೇ ಇದೇ ರಾಮಸ್ವಾಮಿ ಪೋಷಕ ಪಾತ್ರದಲ್ಲಿ ನಟಿಸಿದ ಲವ್‌ ರೆಡ್ಡಿ ಚಿತ್ರ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಖಳನಟನಾಗಿ ರಾಮಸ್ವಾಮಿ ನಟಿಸಿದ್ದರು. ಈಗ ಈ ವಿಲನ್‌ ಪಾತ್ರವೇ ಅವರಿಗೆ ಇಮೇಜ್‌ಗೆ ಡ್ಯಾಮೇಜ್‌ ಮಾಡಿದೆ. ಹಾಗಾದರೆ ಅಷ್ಟಕ್ಕೂ ಏನಾಗಿತ್ತು? ಲವ್‌ ರೆಡ್ಡಿ ಸಿನಿಮಾದಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ ನಟಿಸಿದ್ದಾರೆ ಎನ್‌.ಟಿ ರಾಮಸ್ವಾಮಿ. ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಖಳನಾಗಿ ನಟಿಸಿದ್ದೇ ತಡ, ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಮಹಿಳೆಯೊಬ್ಬರು, ಸಿನಿಮಾ ಮುಗಿಯುತ್ತಿದ್ದಂತೆ, ನೇರವಾಗಿ ಸಿನಿಮಾ ತಂಡದ ಬಳಿ ಬಂದು, ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದವರು ಒಂದು ಕ್ಷಣ ಏನಾಗ್ತಿದೆ ಎಂದೂ ನಿಬ್ಬೆರಗಾಗಿದ್ದಾರೆ. ಕೊನೆಗೆ ಮಹಿಳೆ ಹಲ್ಲೆ ಮಾಡುತ್ತಿದ್ದಂತೆ, ಆಕೆಯನ್ನು ಅಲ್ಲಿದ್ದವರು ಬಿಡಿಸಿದ್ದಾರೆ.

More