ಸಾರ್ವಕಾಲಿಕ ಶ್ರೇಷ್ಠ ತಬಲಾ ವಾದಕ ಜಾಕಿರ್ ಹುಸೇನ್  ಕುರಿತು 10 ಆಸಕ್ತಿಕರ ವಿಚಾರಗಳಿವು

By Raghavendra M Y
Dec 16, 2024

Hindustan Times
Kannada

ಜಾಕಿರ್ ಹುಸೇನ್ ತಮ್ಮ ತಂದೆ ಅಲ್ಲಾ ರಖಾ ಮಾರ್ಗದರ್ಶನದಲ್ಲಿ 3ನೇ ವಯಸ್ಸಿಗೆ ತಬಲಾ ನುಡಿಸಲು ಪ್ರಾರಂಭಿಸಿದರು

ಜಾಕಿರ್ ಹುಸೇನ್ ಅವರು ತಮ್ಮ 7ನೇ ವಯಸ್ಸಿಗೆ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು

12ನೇ ವಯಸ್ಸಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪ್ರದರ್ಶನವನ್ನು ನೀಡಿದ್ದರು. ಈ ಮೂಲಕ ಜಾಗತಿಕವಾಗಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರತಿನಿಧಿಸಿದ್ದರು

ಸಂಗೀತದಲ್ಲಿ ಉತ್ತಮ ಸಾಧನೆ ಮಾಡುವುದರ ಜೊತೆಗೆ ಜಾಕಿರ್ ಹುಸೇನ್ ಶಿಕ್ಷಣದಲ್ಲೂ ಮುಂದಿದ್ದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು

ಮಿಕ್ಕಿ ಹಾರ್ಟ್ ಅವರೊಂದಿಗೆ ಪ್ಲಾನೆಟ್ ಡ್ರಮ್ ಆಲ್ಬಮ್ ನ ಸಹಯೋಗಕ್ಕಾಗಿ ಜಾಕಿರ್ ಹುಸೇನ್ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದರು

ಹೀಟ್ ಅಂಡ್ ಡಸ್ಟ್ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ

ಜಾರ್ಜ್ ಹ್ಯಾರಿಸನ್, ಜಾನ್ ಮೆಕ್ ಲಾಫ್ಲಿನ್ ಹಾಗೂ ಯೋ ಯೋ ಮಾ ಅವರಂತಹ ಅಂತಾರಾಷ್ಟ್ರೀಯ ಕಲಾವಿದರೊಂದಿಗೆ ಜಾಕಿರ್ ಹುಸೇನ್ ಕೆಲಸ ಮಾಡಿದ್ದಾರೆ

ಜಾಕಿರ್ ಹುಸೇನ್ ಅವರು ತಮ್ಮ ಬೋಧನೆ ಮತ್ತು ಕಾರ್ಯಾಗಾರಗಳ ಮೂಲಕ ಮುಂದಿನ ಪೀಳಿಗೆಯ ತಬಲಾ ವಾದಕರನ್ನು ಪೋಷಿಸುವಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು

4 ಬಾರಿ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿರುವ ಜಾಕಿರ್ ಹುಸೇನ್ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ

ಜಾಕಿರ್ ಹುಸೇನ್ ಸಂಗೀತ ಸಂಯೋಜಿಸಿದ 8 ಬಾಲಿವುಡ್ ಗೀತೆಗಳು