ನೆಟ್‌ಫ್ಲಿಕ್ಸ್‌ನ Adolescence ವೆಬ್ ಸೀರಿಸ್‌ನಿಂದ ದಕ್ಕುವ 5 ಜೀವನ ಪಾಠಗಳು
X, ALETEIA
By Manjunath B Kotagunasi Apr 04, 2025
Hindustan Times Kannada
ಇತ್ತೀಚೆಗಷ್ಟೇ Netflixನಲ್ಲಿ ಬಿಡುಗಡೆಯಾಗಿದೆ ಬ್ರಿಟಿಷ್ ವೆಬ್ ಸೀರಿಸ್ ಅಡೋಲೆಸೆನ್ಸ್. ಇದು ಕೊಲೆ ಪ್ರಕರಣದಲ್ಲಿ ಸಿಲುಕಿರುವ 13 ವರ್ಷದ ಜೇಮಿ ಮಿಲ್ಲರ್ ಎಂಬ ವಿದ್ಯಾರ್ಥಿಯ ಕಥೆಯನ್ನು ಒಳಗೊಂಡಿದೆ.
X
ಈ ವೆಬ್ ಸೀರಿಸ್‌ನಿಂದ ವೀಕ್ಷಕನಿಗೆ ಸಿಗುವ ಐದು ಜೀವನ ಪಾಠಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.
X
ಡಿಜಿಟಲ್ ಜಗತ್ತಿನ ಸವಾಲುಗಳನ್ನು ಈ ಸೀರಿಸ್ ತೋರಿಸಿದೆ. ಸಾಮಾಜಿಕ ಮಾಧ್ಯಮದ ಪ್ರಭಾವ, ಮಕ್ಕಳ ಮೇಲೆ ಎಷ್ಟು ಇದೆ ಎಂಬುದನ್ನು ಈ ಸೀರಿಸ್ ತಿಳಿಸಲು ಪ್ರಯತ್ನಿಸಿದೆ. ಇದು ಪ್ರತಿ ಪೋಷಕರಿಗೂ ಒಂದು ಪಾಠವಾಗಿದೆ.
PEXELS
ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು ತಪ್ಪು ದಾರಿಗೆ ಹೋಗದಂತೆ ಅವರು ಇಂಟರ್‌ನೆಟ್‌ನಲ್ಲಿ ಏನೆನೆಲ್ಲ ನೋಡುತ್ತಿದ್ದಾರೆ? ಅದನ್ನು ಪೋಷಕರು ಹೇಗೆ ಪತ್ತೆ ಮಾಡಬೇಕು ಎಂಬ ವಿಚಾರವನ್ನೂ ಇಲ್ಲಿ ಹೇಳಲಾಗಿದೆ.
X
ಮನೆಯಲ್ಲಿ ಬೆಳೆಯುವ ಹುಡುಗರ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಂತೆ ತಂದೆಯಾದವನು ಹೇಗಿರಬೇಕು, ಆತನ ಪಾತ್ರ ಎಂಥದ್ದು ಎಂದು ಅಡೋಲೆಸೆನ್ಸ್ ಸೀರಿಸ್ ಹೇಳುತ್ತದೆ.
X
ಡಿಜಿಟಲ್ ಜಗತ್ತಿನಲ್ಲಿರುವ ಅವಕಾಶಗಳು ಮತ್ತು ಅಪಾಯಗಳ ಬಗ್ಗೆ ತಮ್ಮ ಮಕ್ಕಳೊಂದಿಗೆ ಪೋಷಕರು ಮನೆಯಲ್ಲಿ ಮುಕ್ತವಾಗಿ ಮಾತನಾಡಬೇಕು ಎಂಬ ಅಗತ್ಯವನ್ನು ಈ ಸೀರಿಸ್ ಹೇಳುತ್ತದೆ. ಇದರಿಂದ ಮಕ್ಕಳು ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ತಿಳಿಯಲು ಪ್ರಯತ್ನಿಸುತ್ತಾರೆ.
X
ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು ಮಾಡುವ ಪ್ರತಿ ಕೆಲಸವನ್ನೂ ಗಮನಿಸುತ್ತಿರಲು ಪೋಷಕರಿಗೆ ಕಷ್ಟ. ಆದರೆ ಇದರಲ್ಲಿರುವ ಸವಾಲುಗಳು ಏನು? ಅವುಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಪೋಷಕರಿಗೆ ಅರಿವು ಮೂಡಿಸುತ್ತದೆ ಈ ಸಿರೀಸ್.