ಅಂಬೇಡ್ಕರ್ ಜೀವನಾಧಾರಿತ ಸಿನಿಮಾ, ಧಾರಾವಾಹಿಗಳು; ಅಂಬೇಡ್ಕರ್ ಜಯಂತಿ ವಿಶೇಷ 

By Reshma
Apr 13, 2025

Hindustan Times
Kannada

ಏಪ್ರಿಲ್ 14 ಅಂಬೇಡ್ಕರ್ ಜನ್ಮದಿನ. ಭಾರತದಲ್ಲಿ ಪ್ರತಿವರ್ಷ ಅಂಬ್ಕೇಡರ್ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ  

ಭಾರತ ಸಂವಿಧಾನವನ್ನು ರಚಿಸಿದ ಧೀಮಂತ ಅಂಬೇಡ್ಕರ್ ಅವರ ಬದುಕನ್ನು ಆಧರಿಸಿದ ಹಲವು ಸಿನಿಮಾ, ಧಾರಾವಾಹಿಗಳು ಪ್ರಸಾರವಾಗಿವೆ 

ಅಂಬೇಡ್ಕರ್ ಜಯಂತಿ ಸಂದರ್ಭ ನೀವು ಅಂಬೇಡ್ಕರ್ ಬದುಕಿನ ಕುರಿತು ತಿಳಿಯ ಬಯಸಿದರೆ ಈ ಸಿನಿಮಾ, ಧಾರಾವಾಹಿಗಳನ್ನು ನೋಡಿ 

ಏಕ್ ಮಹಾನಾಯಕ್–ಡಾ ಬಿಆರ್ ಅಂಬೇಡ್ಕರ್‌: 2019ರಿಂದ 2021ರವರೆಗೆ ಪ್ರಸಾರವಾದ ಹಿಂದಿ ಧಾರಾವಾಹಿ. ಇದನ್ನು ನೀವು ಜೀ5 ನಲ್ಲಿ ವೀಕ್ಷಿಸಬಹುದು.  

ಮಹಾನಾಯಕ: ಹಿಂದಿಯ ಏಕ್‌–ಮಹಾನಾಯಕ್ ಜೀ ಕನ್ನಡದಲ್ಲಿ ಮಹಾನಾಯಕ ಹೆಸರಿನಲ್ಲಿ ಪ್ರಸಾರವಾಗಿತ್ತು

ಮನ ಅಂಬೇಡ್ಕರ್‌: ಇದು ಕೂಡ ಏಕ್ ಮಹಾನಾಯಕದ ತೆಲುಗು ಡಬ್‌ 

ಡಾ ಬಿಆರ್ ಅಂಬೇಡ್ಕರ್: ಇದು 2000ನೇ ಇಸವಿಯಲ್ಲಿ ಬಿಡುಗಡೆಯಾದ ಸಿನಿಮಾ. ಈ ಸಿನಿಮಾವನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನೋಡಬಹುದು. ಇದು ಯುಟ್ಯೂಬ್‌ನಲ್ಲಿ ಲಭ್ಯವಿದೆ

ರಮಾಬಾಯಿ ಭೀಮಾರಾವ್ ಅಂಬೇಡ್ಕರ್‌: ಇದು ಅಂಬೇಡ್ಕರ್ ಪತ್ನಿ ರಮಾಬಾಯಿ ಅವರ ಆತ್ಮಕಥೆಯನ್ನು ಆಧರಿಸಿದ ಸಿನಿಮಾ. ಅಮೆಜಾನ್ ಪ್ರೈಮ್‌ ವಿಡಿಯೊದಲ್ಲಿ ನೋಡಬಹುದು, ಇದು ಏರ್‌ಟೆಲ್‌ ಎಕ್ಸ್ಟ್ರೀಮ್‌ನಲ್ಲೂ ಸಿಗುತ್ತೆ.

ಬೋಲೆ ಜೈ ಭೀಮ್‌: ಇದು ಮರಾಠಿ ಭಾಷೆಯ ಚಿತ್ರ. ಇದು ಅಂಬೇಡ್ಕರ್ ಜೀವನ ಆಧರಿಸಿದ ಸಿನಿಮಾ 

ಜೈ ಭೀಮ್‌: ಇದು ತಮಿಳಿನ ಸೂರ್ಯ ನಟನೆಯ ಚಿತ್ರ. ಇದನ್ನು ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಬಹುದು 

ಭೀಮ ಘರ್ಜನ: ಇದು 1990 ರಲ್ಲಿ ಬಿಡುಗಡೆಯಾದ ಅಂಬೇಡ್ಕರ್ ಜೀವನಾಧಾರಿತ ಮರಾಠಿ ಸಿನಿಮಾ 

ರಮಾಬಾಯಿ: ಇದು ಅಂಬೇಡ್ಕರ್ ಪತ್ನಿ ರಮಾಬಾಯಿ ಅವರ ಆತ್ಮಕಥೆ ಆಧರಿಸಿದ ಕನ್ನಡ ಚಿತ್ರ. ಯಜ್ಞಾ ಶೆಟ್ಟಿ ನಟನೆಯ ಚಿತ್ರವಿದು 

Horoscope: ಮಕ್ಕಳು ಪ್ರಗತಿ ಹೊಂದುತ್ತಾರೆ; ಏಪ್ರಿಲ್ 20ರ ಭಾನುವಾರ ದಿನ ಭವಿಷ್ಯ