ಕೊನೆಗೂ ಡುಮ್ಮಸರ್‌ಗೆ ಅಮ್ಮ-ತಂಗಿ ಸಿಕ್ಕಿಬಿಟ್ರು- ಅಮೃತಧಾರೆ ಧಾರಾವಾಹಿ

By Praveen Chandra B
Jan 01, 2025

Hindustan Times
Kannada

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ಗೆ ಅಮ್ಮ ಮತ್ತು ತಂಗಿ ಸಿಕ್ಕಿದ್ದಾರೆ. ದೇವಾಲಯದಲ್ಲಿ ಭೂಮಿಕಾ ನೀಡಿರುವ ಸರ್‌ಪ್ರೈಸ್‌ಗೆ ಡುಮ್ಮಸರ್‌ ಕಣ್ಣೀರಾಗಿದ್ದಾರೆ.

ಸುಧಾಳನ್ನು ಮನೆಯಿಂದ ಓಡಿಸುವ ಸಮಯದಲ್ಲಿ ಭೂಮಿಕಾಳಿಗೆ ಗೌತಮ್‌ ಅಮ್ಮ ಮತ್ತು ತಂಗಿಯ ಸುಳಿವು ದೊರಕಿತ್ತು. ಸುಧಾ ಬೇರೆ ಯಾರೂ ಅಲ್ಲ, ಗೌತಮ್‌ ತಂಗಿ ಎಂದು ಗೊತ್ತಾಗಿತ್ತು.

ಇದೇ ಸಮಯದಲ್ಲಿ ಅಮ್ಮ ಮತ್ತು ತಂಗಿಯನ್ನು ಗೌತಮ್‌ಗೆ ದೇವಸ್ಥಾನದಲ್ಲಿ ಭೇಟಿ ಮಾಡಿಸುವ ಯೋಜನೆ ಹಾಕಿಕೊಂಡಿದ್ದರು. 

ದೇವಾಲಯಕ್ಕೆ ಬಂದ ಗೌತಮ್‌ ಮತ್ತು ಭೂಮಿಕಾಳ ಕುರಿತು ಶಕುಂತಲಾ ಗ್ಯಾಂಗ್‌ಗೆ ಅನುಮಾನವಿತ್ತು. "ನಿಮಗೊಂದು ಸರ್‌ಪ್ರೈಸ್‌ ಇದೆ" ಎಂದು ಭೂಮಿಕಾ ಗೌತಮ್‌ಗೆ ಹೇಳಿದ್ದಳು.

ರಿಕ್ಷಾದಲ್ಲಿ ಸುಧಾ ಮತ್ತು ಭಾಗ್ಯಮ್ಮ ಬಂದಿದ್ದಾರೆ. ಇವರು ಗೌತಮ್‌ ತಾಯಿ ಎಂದು ಪರಿಚಯಿಸಿದಾಗ ಎಲ್ಲರಿಗೂ ಅಚ್ಚರಿಯಾಗಿದೆ.

ಆರ್ಚಕರು ಮಂಗಳಾರತಿ ನೀಡುವ ಸಮಯದಲ್ಲಿಯೇ ಗೌತಮ್‌ ತಲೆ ಎತ್ತಿ ನೋಡಿದ್ದಾರೆ. ಆತನಿಗೆ ತನ್ನ ತಾಯಿ ಕಾಣಿಸಿದ್ದಾರೆ. ಗೌತಮ್‌ ಭಾವುಕರಾಗಿ ಅಮ್ಮನನ್ನ ಬಿಗಿದಪ್ಪಿದ್ದಾರೆ.

ತಾಯಿ ಮತ್ತು ತಂಗಿ ಸಿಕ್ಕ ತಕ್ಷಣ ಶಕುಂತಲಾ ಗ್ಯಾಂಗ್‌ನ ಮುಖವಾಡ ಕಳಚಿಬೀಳಬಹುದು ಎಂದುಕೊಳ್ಳುವಂತೆ ಇಲ್ಲ. ಏಕೆಂದರೆ, ಈಗ ಭಾಗ್ಯಮ್ಮನಿಗೆ ಹುಷಾರಿಲ್ಲ.

ಭಾಗ್ಮಮ್ಮನಿಗೆ ಹಳೆಯದ್ದನ್ನು ಗೌತಮ್‌ಗೆ ಹೇಳುವ ಶಕ್ತಿ ಇರುವುದೇ ತಿಳಿದಿಲ್ಲ. ಹೀಗಾಗಿ, ಸದ್ಯ ಶಕುಂತಲಾ ಗ್ಯಾಂಗ್‌ಗೆ ಏನು ತೊಂದರೆ ಇರುವಂತೆ ಕಾಣಿಸುತ್ತಿಲ್ಲ.

ಒಟ್ಟಾರೆ ಹಲವು ತಿಂಗಳುಗಳಿಂದ ಅಮೃತಧಾರೆ ಸೀರಿಯಲ್‌ನಲ್ಲಿ ಪ್ರಮುಖ ಕುತೂಹಲವಾಗಿದ್ದ ಈ ದೃಶ್ಯ ಕೊನೆಗೂ ಪ್ರಸಾರವಾಗುತ್ತಿದೆ. ಇಂದು ಮತ್ತು ನಾಳೆಯ ಸಂಚಿಕೆಯಲ್ಲಿ ಈ ಕುರಿತು ಹೆಚ್ಚಿನ ವಿವರ ವೀಕ್ಷಕರಿಗೆ ತಿಳಿಯಲಿದೆ. 

ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?