ಜಾತಕದಲ್ಲಿ ರಾಹು ಸ್ಥಾನ ಬಲಗೊಳ್ಳಲು ಈ ಪರಿಹಾರಗಳನ್ನು ಮಾಡಿ

By Rakshitha Sowmya
Dec 27, 2024

Hindustan Times
Kannada

ಜ್ಯೋತಿಷ್ಯಶಾಸ್ತ್ರದಲ್ಲಿ ಜಾತಕದಲ್ಲಿ ರಾಹು ದುರ್ಬಲನಾಗಿದ್ದರೆ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ 

ಇದರಿಂದ ಆಯಾ ರಾಶಿಯವರು ಅನಾರೋಗ್ಯ, ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡದಿಂದ ಬಳಲಬೇಕಾಗಬಹುದು

ಜ್ಯೋತಿಷ್ಯದಲ್ಲಿ ರಾಹುವಿನ ಸ್ಥಾನವನ್ನು ಬಲಪಡಿಸಲು ಕೆಲವೊಂದು ಪರಿಹಾರಗಳಿವೆ

ಕಾಗೆ, ಗುಬ್ಬಚ್ಚಿ ಸೇರಿದಂತೆ ಪಕ್ಷಿಗಳಿಗೆ ಆಹಾರ ಧಾನ್ಯಗಳನ್ನು ನೀಡುವುದು ರಾಹುವಿನ ಸ್ಥಾನವನ್ನು ಬಲಪಡಿಸುತ್ತದೆ

ರಾಹುವಿನ ಅಶುಭ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಓಂ ಭ್ರಂ ಭ್ರೂಂ ಸಃ ರಾಹವೇ ನಮಃ ಎಂಬ ರಾಹು ಬೀಜ ಮಂತ್ರವನ್ನು ಪಠಿಸಿ

ರಾಹು ಯಂತ್ರವನ್ನು ಮನೆಯಲ್ಲಿ ಅಳವಡಿಸಿ, ಜೊತೆಗೆ ರಾಹು ರಕ್ಷಾ ಕವಚವನ್ನು ನಿಯಮಿತವಾಗಿ ಜಪಿಸಬೇಕು

ರಾಹುವಿನ ಸ್ಥಾನ ಗಟ್ಟಿಯಾಗಲು ಆಂಜನೇಯನ ದೇವಸ್ಥಾನಕ್ಕೆ ತೆರಳಿ ಎಳ್ಳು,  ಬಾರ್ಲಿಯನ್ನು ದಾನ ಮಾಡಬೇಕು

ಪ್ರತಿದಿನ ರಸ್ತೆಬದಿ ನಾಯಿಗಳಿಗೆ ಆಹಾರ ನೀಡುವುದರಿಂದ ಕೂಡಾ ರಾಹುವಿನ ಆಶೀರ್ವಾದ ಪಡೆಯಬಹುದು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪಾರ್ಶ್ವವಾಯು ಬರುವ ಮೊದಲು ದೇಹದಲ್ಲಿ ಯಾವೆಲ್ಲಾ ಬದಲಾವಣೆ ಕಾಣಿಸುತ್ತೆ?

Image Source From unsplash