ಈ ತಾರೀಖಿನಂದು ಜನಿಸಿದ ಹುಡುಗಿಯರು ಸರ್ಕಾರಿ ಉದ್ಯೋಗ ಗಳಿಸುತ್ತಾರೆ
By Rakshitha Sowmya May 14, 2024
Hindustan Times Kannada
ಸಂಖ್ಯಾಶಾಸ್ತ್ರವು ಜ್ಯೋತಿಷ್ಯದ ಒಂದು ಭಾಗವಾಗಿದ್ದು ಅದು ಸಂಖ್ಯೆಗಳು ಹಾಗೂ ಗ್ರಹಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತದೆ
ಸಂಖ್ಯಾಶಾಸ್ತ್ರದಲ್ಲಿ ಮುಖ್ಯವಾಗಿ 1 ರಿಂದ 9ವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಎಂದು ಕರೆಯಲಾಗುತ್ತದೆ.
ಇದರ ಪ್ರಕಾರ ನಿರ್ದಿಷ್ಟ ರಾಡಿಕ್ಸ್ ಸಂಖ್ಯೆಯಲ್ಲಿ ಜನಿಸಿದವರು ಚಿಕ್ಕಂದಿನಿಂದಲೇ ಬಹಳ ಅಪರೂಪದ ಗುಣಗಳನ್ನು ಹೊಂದಿರುತ್ತಾರೆ
ಸಂಖ್ಯಾಶಾಸ್ತ್ರದ ಪ್ರಕಾರ 1 ನೇ ತಾರೀಖಿನಂದು ಹುಟ್ಟಿದವರನ್ನು ಬಹಳ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಈ ರಾಡಿಕ್ಸ್‌ನ ಅಧಿಪತಿ ಗ್ರಹಗಳ ರಾಜ ಸೂರ್ಯ
ಈ ರಾಡಿಕ್ಸ್ ಯುವತಿಯರ ಮೇಲೆ ಸೂರ್ಯನು ವಿಶೇಷ ಪ್ರಭಾವ ಬೀರುತ್ತಾನೆ. ಸದಾ ಸೂರ್ಯನ ಆಶೀರ್ವಾದ ಇವರಿಗೆ ಇರುತ್ತದೆ
1ನೇ ದಿನಾಂಕದಂದು ಜನಿಸಿದ ಬಹುತೇಕ ಯುವತಿಯರು ತಮ್ಮ ಕಠಿಣ ಪರಿಶ್ರಮದಿಂದ ಕಷ್ಟಪಟ್ಟು ಓದಿ ಸರ್ಕಾರಿ ಉದ್ಯೋಗ ಗಳಿಸುತ್ತಾರೆ
ಈ ಸಂಖ್ಯೆಗೆ ಸೇರಿದವರು ಬಹಳ ಶಿಸ್ತು, ಧೈರ್ಯಶಾಲಿಗಳು, ಯಾವುದೇ ಕೆಲಸವನ್ನು ಚಾಲೆಂಜ್ ಆಗಿ ಸ್ವೀಕರಿಸಿ ಪೂರ್ಣಗೊಳಿಸುತ್ತಾರೆ
ಎಲೆಕ್ಟ್ರಾನಿಕ್ಸ್, ಸಂಶೋಧನೆ, ವಿದ್ಯುತ್ ಸಂಬಂಧಿತ ವ್ಯಾಪಾರ, ಸರ್ಕಾರಿ ಒಪ್ಪಂದಗಳು ಸೇರಿದಂತೆ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ
ಸಂಗೀತ, ಬರವಣಿಗೆ, ವಿನ್ಯಾಸ ಸೇರಿದಂತೆ ಇನ್ನಿತರ ಕಲೆಗಳು ಇವರಿಗೆ ಸುಲಭವಾಗಿ ಒಲಿಯುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಚಳಿಗಾಲದಲ್ಲಿ ಹೆಚ್ಚಾಗುವ ಕಫದ ಸಮಸ್ಯೆಯನ್ನು ನಿವಾರಿಸಲು ಇಲ್ಲಿವೆ ಮನೆಮದ್ದು