ಈ ದಿನಾಂಕದಂದು ಜನಿಸಿದ ಹೆಣ್ಮಕ್ಕಳು ರಾಣಿಯಂತೆ ಬದುಕುತ್ತಾರೆ
By Jayaraj May 09, 2024
Hindustan Times Kannada
ಸಂಖ್ಯಾಶಾಸ್ತ್ರದ ಪ್ರಕಾರ, ಮೂಲ ಸಂಖ್ಯೆ 6 ಆಗಿರುವ ಹುಡುಗಿಯರು ಹಣದ ವಿಷಯದಲ್ಲಿ ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ.
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 6, 15 ಮತ್ತು 24ನೇ ತಾರೀಖಿನಂದು ಜನಿಸಿದ ಹುಡುಗಿಯರ ಮೂಲ ಸಂಖ್ಯೆ 6 ಆಗಿರುತ್ತದೆ.
ಇಂಥಾ ಹುಡುಗಿಯರು ಕೈ ಹಾಕುವ ಯಾವುದೇ ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾರೆ.
ವಯಸ್ಸು ಹೆಚ್ಚಾದಂತೆ ಸೌಂದರ್ಯ ಕೂಡಾ ಹೆಚ್ಚಾಗುತ್ತದೆ. ನೋಡಲು ನಿಜವಾದ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ.
ಇವರು ಶಾಂತ ಸ್ವಭಾವದವರು ಹಾಗೂ ವಿಶ್ವಾಸಾರ್ಹರು. ಸ್ವಭಾವದಿಂದಲೇ ಇನ್ನೊಬ್ಬರ ಹೃದಯ ಗೆಲ್ಲಬಲ್ಲದರು.
ಸಂಗೀತ, ನಾಟಕ, ನೃತ್ಯದಂತಹ ಕಲೆಗಳನ್ನು ಇವರು ಇಷ್ಟಪಡುತ್ತಾರೆ. ಇವರು ಸೃಜನಶೀಲರು ಕೂಡಾ.
ಸಂಖ್ಯಾಶಾಸ್ತ್ರದ ಪ್ರಕಾರ, ಈ ದಿನಾಂಕದಂದು ಜನಿಸಿದ ಹೆಣ್ಣು ಮಕ್ಕಳು ವೃತ್ತಿಯಲ್ಲಿ ಶುಕ್ರನ ಪ್ರಭಾವ ಇರುವ ಕ್ಷೇತ್ರಗಳಲ್ಲಿರುತ್ತಾರೆ. ಬ್ಯೂಟಿ ಪಾರ್ಲರ್, ಜ್ಯುವೆಲ್ಲರ್ಸ್ ಇತ್ಯಾದಿ ಸೌಂದರ್ಯಕ್ಕೆ ಸಂಬಂಧಿತ ವೃತ್ತಿ ಮಾಡುತ್ತಾರೆ.
(ಈ ಮಾಹಿತಿಯು ಧಾರ್ಮಿಕ ನಂಬಿಕೆ, ಧರ್ಮಗ್ರಂಥ ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿ ಕೊಡಲಾಗಿದೆ)