ನಿಮ್ಮ ರಾಶಿಗೆ ಸರಿಹೊಂದುವ ಟ್ಯಾಟೂ ಡಿಸೈನ್‌ಗಳಿವು
By Jayaraj
Jul 06, 2024
Hindustan Times
Kannada
ಮೇಷ ರಾಶಿಯವರು ಸಾಹಸಮಯ ಮತ್ತು ದಿಟ್ಟ ಮನೋಭಾವದವರು. ಕೊಂಬುಗಳು ಅಥವಾ ಜ್ವಾಲೆಯನ್ನು ಪ್ರತಿಬಿಂಬಿಸುವ ಟ್ಯಾಟೂ ಧೈರ್ಯ ಮತ್ತು ನಾಯಕತ್ವದ ಗುಣ ಪ್ರತಿನಿಧಿಸುತ್ತವೆ.
ವೃಷಭ ರಾಶಿಯವರು ಸ್ಥಿರತೆ ಮತ್ತು ಐಷಾರಾಮ ಇಷ್ಟಪಡುತ್ತಾರೆ. ಗೂಳಿ, ಅರಳುವ ಹೂ ಅಥವಾ ಪ್ರಕೃತಿಯ ದೃಶ್ಯಗಳ ಹಚ್ಚೆ ಸೂಕ್ತ.
ಮಿಥುನ ರಾಶಿಯವರು ತಮ್ಮ ದ್ವಂದ್ವ ವ್ಯಕ್ತಿತ್ವ ಮತ್ತು ಕುತೂಹಲಕ್ಕೆ ಹೆಸರುವಾಸಿ. ಪುಸ್ತಕಗಳು ಅಥವಾ ಯಿನ್-ಯಾಂಗ್ ವಿನ್ಯಾಸ ಸರಿಹೊಂದುತ್ತದೆ.
ಕರ್ಕಾಟಕ ರಾಶಿಯವರು ಭಾವನಾತ್ಮಕ ವ್ಯಕ್ತಿಗಳು. ಚಂದ್ರ, ಏಡಿ ಅಥವಾ ನೀರಿಗೆ ಸಂಬಂಧಿಸಿದ ಡಿಸೈನ್ ಇವರಿಗೆ ಉತ್ತಮ.
ಸಿಂಹ ರಾಶಿಯವರು ಆತ್ಮವಿಶ್ವಾಸ ಮತ್ತು ನೈಜತೆಯನ್ನು ಪ್ರತಿನಿಧೀಸುತ್ತಾರೆ. ಸಿಂಹ, ಸೂರ್ಯ ಅಥವಾ ಕಿರೀಟದ ಹಚ್ಚೆ ತಮ್ಮ ನಾಯಕತ್ವದ ಗುಣವನ್ನು ಪ್ರತಿಬಿಂಬಿಸಬಹುದು.
ಕನ್ಯಾ ರಾಶಿಯವರು ಪರಿಪೂರ್ಣತೆಯ ಸಂಕೇತ. ಗೋಧಿಯ ಚಿಹ್ನೆಗಳು, ವಿಶ್ಲೇಷಣಾತ್ಮಕ ಮಾದರಿಗಳು ಉತ್ತಮ.
ತುಲಾ ರಾಶಿಯವರಿಗೆ ಮಾಪಕಗಳು, ಸಮತೋಲನದ ಚಿಹ್ನೆಗಳು ಅಥವಾ ನ್ಯಾಯದ ಪ್ರಾತಿನಿಧಿಕ ಡಿಸೈನ್ ಒಪ್ಪುತ್ತವೆ.
ವೃಶ್ಚಿಕ ರಾಶಿಯವರು ಜಾಣತನ ಮತ್ತು ಕೌಶಲ್ಯಯುತರು. ಚೇಳು, ಫೀನಿಕ್ಸ್ ಅಥವಾ ಗಾಢ ಥೀಮ್ ಇರುವ ಟ್ಯಾಟೂಗಳು ಅವರ ಉತ್ಸಾಹವನ್ನು ಸಂಕೇತಿಸುತ್ತದೆ.
ಧನು ರಾಶಿಯವರು ಸಾಹಸ ಪ್ರಿಯರು ಮತ್ತು ಆಶಾವಾದಿಗಳು. ಬಾಣ, ಗೋಳ ಅಥವಾ ಸಾಹಸ-ಸಂಬಂಧಿತ ಚಿತ್ರಗಳ ಹಚ್ಚೆ ಹಾಕಿಸಬಹುದು.
ಮಕರ ರಾಶಿಯವರು ತಮ್ಮ ನಿರ್ಣಯ ಮತ್ತು ಮಹತ್ವಾಕಾಂಕ್ಷೆಗೆ ಹೆಸರುವಾಸಿಯಾಗಿದ್ದಾರೆ. ಪರ್ವತ ಅಥವಾ ಮಹತ್ವಾಕಾಂಕ್ಷೆಯ ಚಿಹ್ನೆಗಳ ಟ್ಯೂಟೂ ಹಾಕಿಸಬಹುದು.
ಕುಂಭ ರಾಶಿಯವರು ಮುಕ್ತ ಮನೋಭಾವ ಮತ್ತು ಮಾನವೀಯರು. ಅಲೆಗಳ ಟ್ಯಾಟೂಗಳು ಉತ್ತಮ.
ಮೀನ ರಾಶಿಯವರು ಸಹಾನುಭೂತಿ ಮತ್ತು ಕಲಾತ್ಮಕರು. ಮೀನಿನ ಟ್ಯಾಟೂ, ನೀರಿನ ವಿಷಯದ ವಿನ್ಯಾಸ ಮಾಡಿಸಬಹುದು.
All photos: Pexels
ನಿವೇದಿತಾ ಗೌಡ ಅವತಾರ ಕಂಡು ‘ಕಾಮೆಂಟ್ ಹಾಕೋಕು ಅಸಹ್ಯ ಆಗ್ತಿದೆ’ ಎಂದ ನೆಟ್ಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ