ಸಂಖ್ಯಾಶಾಸ್ತ್ರ: ಈ ರಾಡಿಕ್ಸ್ ಸಂಖ್ಯೆಯ ಹುಡುಗಿಯರು ಕೂಲ್‌ಕೂಲ್ 

By Jayaraj
May 10, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ, ಒಬ್ಬರ ವ್ಯಕ್ತಿತ್ವವನ್ನು ಯಾವುದೇ ರಾಡಿಕ್ಸ್ ಸಂಖ್ಯೆಯಿಂದ ತಿಳಿಯಬಹುದು.

ಹಾಗಿದ್ದರೆ, ಸ್ವಭಾವದಲ್ಲಿ ತುಂಬಾ ಶಾಂತವಾಗಿರುವ ಹುಡುಗಿಯರ ರಾಡಿಕ್ಸ್‌ ಸಂಖ್ಯೆ ಯಾವುದು ಎಂಬುದನ್ನು ನೋಡೋಣ. 

ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ ಸಂಖ್ಯೆ 8 ಇರುವ ಹುಡುಗಿಯರು ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ. ಗಂಭೀರವಾಗಿ ಕಂಡರೂ ಮುಗ್ಧತೆ ಇರುತ್ತದೆ.

ಯಾವುದೇ ತಿಂಗಳ 8, 17 ಅಥವಾ 26ರಂದು ಜನಿಸಿದ ಹುಡುಗಿಯರ ರಾಡಿಕ್ಸ್ ಸಂಖ್ಯೆ 8 ಆಗಿರುತ್ತದೆ.

ಮೂಲಾಂಕ 8ರ ಸ್ವಾಮಿ ಗ್ರಹ ಶನಿ. ಶಾಂತ ಮತ್ತು ಗಂಭೀರವಾಗಿರುವುದರ ಜೊತೆಗೆ, ಈ ರಾಡಿಕ್ಸ್ ಸಂಖ್ಯೆಯ ಹುಡುಗಿಯರು ಸ್ವಭಾವತಃ ಅಂತರ್ಮುಖಿಯಾಗಿರುತ್ತಾರೆ.

ಈ ರಾಡಿಕ್ಸ್ ಸಂಖ್ಯೆಯ ಹುಡುಗಿಯರು ನಿಧಾನವಾಗಿ ತಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಾರೆ.

ಕೆಲಸದಲ್ಲಿ ಆಗಾಗ್ಗೆ ಅಡೆತಡೆಗಳು ಎದುರಾದರೂ, ಯಾವುದೇ ರೀತಿಯ ಸಮಸ್ಯೆಗಳಿಗೆ ಅಂಜದೆ ಮುನ್ನಗ್ಗುವ ಧೈರ್ಯ ಬೆಳೆಯುತ್ತದೆ.

ಈ ರಾಡಿಕ್ಸ್‌ ಸಂಖ್ಯೆಯ ನಾರಿಯರು ಉತ್ತಮ ಶಿಕ್ಷಣ ಪಡೆಯುತ್ತಾರೆ. ಅದಕ್ಕಾಗಿ ಸ್ವಲ್ಪ ಕಷ್ಟಪಡಬೇಕಾಗುತ್ತದೆ.

ರಾಡಿಕ್ಸ್ ಸಂಖ್ಯೆ 8ರ ಹುಡುಗಿಯರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇತಿಮಿತಿಯಲ್ಲಿ ಖರ್ಚು ಮಾಡುವ ಮೂಲಕ ಹಣ ವ್ಯರ್ಥವಾಗಲು ಬಿಡಲ್ಲ.

(ಈ ಮಾಹಿತಿಯು ಧಾರ್ಮಿಕ ನಂಬಿಕೆ, ಧರ್ಮಗ್ರಂಥ ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿ ಕೊಡಲಾಗಿದೆ)

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ