ಈ ರಾಡಿಕ್ಸ್‌ ನಂಬರ್‌ ಜನರು ಆಕರ್ಷಕ ಮಾತಿನಿಂದಲೇ ಮನಸ್ಸು ಗೆಲ್ಲುವ ಚತುರರು 

By Rakshitha Sowmya
Jun 08, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್‌ ನಂಬರ್‌ 5 ಜನರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ. ಯಾವುದೇ ತಿಂಗಳ 5,14,23 ರಂದು ಜನಿಸಿದವರು 5 ಮೂಲ ಸಂಖ್ಯೆ ಹೊಂದಿರುತ್ತಾರೆ

ಈ ದಿನಾಂಕದಂದು ಜನಿಸಿದವರ ಅಧಿಪತಿ ಬುಧ ಗ್ರಹ, ಬುಧನ ಆಶೀರ್ವಾದದಿಂದ ಈ ಜನರು ವಿಶೇಷ ಜ್ಞಾನ, ಬುದ್ಧಿವಂತಿಕೆ ಹೊಂದಿರುತ್ತಾರೆ

ಈ ತಾರೀಖಿನಿಂದು ಜನಿಸಿದವರು ಬಹಳ ಬುದ್ಧಿವಂತರು ಹಾಗೂ ಧೈರ್ಯಶಾಲಿಗಳು

ಮಾತಿನ ವರಸೆಯಿಂದಲೇ ಇವರು ತಮ್ಮ ಎದುರಿಗೆ ಇರುವ ವ್ಯಕ್ತಿಗಳನ್ನು ಆಕರ್ಷಿಸುತ್ತಾರೆ

ಈ ವ್ಯಕ್ತಿಗಳು ಬಹುಮುಖ ಪ್ರತಿಭೆಗಳಾಗಿರುತ್ತಾರೆ

ಇತರರ ಬಗ್ಗೆ ಬಹಳ ಸಹಾನುಭೂತಿ ಹೊಂದಿರುವ ಇವರು ಯಾರೇ ಕಷ್ಟ ಎಂದು ಬಂದರೂ ಸಹಾಯ ಮಾಡುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ ಈ ಜನರಿಗೆ ಬರವಣಿಗೆ, ಪತ್ರಿಕೋದ್ಯಮ, ಸಿನಿಮಾ ರಂಗದಲ್ಲಿ ಹೆಸರು ಮಾಡಲು ಅವಕಾಶವಿದೆ. 

ಯಾವುದೇ ಕೆಲಸ ಒಪ್ಪಿಕೊಂಡರೂ ಕಠಿಣ ಪರಿಶ್ರಮದಿಂದ ಗುರಿ ಮುಟ್ಟುತ್ತಾರೆ, ಉತ್ತಮ ಸಾಧನೆ ಮಾಡುತ್ತಾರೆ

ಆದರೆ ಈ ಜನರಿಗೆ ಪ್ರೀತಿ ಸುಲಭವಾಗಿ ಒಲಿಯುವುದಿಲ್ಲ, ದೊರೆತರೂ ಅದಕ್ಕಾಗಿ ಬಹಳ ಸಮಯ ಕಾಯಬೇಕು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ರಶ್ಮಿಕಾ ಮಂದಣ್ಣರ ಹೊಸ ಕ್ಯೂಟ್‌ ಫೋಟೋಗಳು ವೈರಲ್‌

AFP