ಪಿತೃಪಕ್ಷ ಯಾವಾಗ ಆರಂಭ; ಪೂರ್ವಜರ ಆರಾಧನೆ ಏಕೆ ಅಗತ್ಯ?

By Jayaraj
Sep 10, 2024

Hindustan Times
Kannada

ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ಮಹತ್ವವಿದೆ. ಪ್ರತಿ ವರ್ಷ ಭಾದ್ರಪದ ಮಾಸದ ಹುಣ್ಣಿಮೆಯ ಮರುದಿನದಿಂದ ಪಿತೃಪಕ್ಷ ಆರಂಭವಾಗುತ್ತದೆ.

ಪಿತೃಪಕ್ಷದಲ್ಲಿ ಶ್ರಾದ್ಧ, ತರ್ಪಣ, ಪಿಂಡ ಪ್ರದಾನ ಮಾಡುವುದರಿಂದ ಮಡಿದವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.

2024ರಲ್ಲಿ ಪಿತೃ ಪಕ್ಷ ಯಾವಾಗ ಮತ್ತು ಅದರ ಮಹತ್ವವೇನು ಎಂಬುದನ್ನು ತಿಳಿಯೋಣ.

ಈ ವರ್ಷ, ಭಾದ್ರಪದ ಮಾಸದ ಹುಣ್ಣಿಮೆ ಸೆಪ್ಟೆಂಬರ್ 17ರಂದು ಆಚರಿಸಲಾಗುತ್ತದೆ. ಹೀಗಾಗಿ ಪಿತೃಪಕ್ಷ 18ರಿಂದ ಆರಂಭವಾಗಿ ಅಕ್ಟೋಬರ್ 2ರವರೆಗೆ ಇರಲಿದೆ. 

ಸೆ.18ರಿಂದ ಪಿಂಡ ಪ್ರದಾನ, ತರ್ಪಣ, ದಾನ ಮುಂತಾದ ಕಾರ್ಯಗಳು ಆರಂಭವಾಗಲಿವೆ.

ನಮ್ಮ ಹಿರಿಯರ ನಂಬಿಕೆಗಳ ಪ್ರಕಾರ, ದೈವ ದೇವರುಗಳ ಪೂಜೆಯನ್ನು ಬೆಳಗ್ಗೆ ಮತ್ತು ಸಂಜೆ ಮಾಡಿದರೆ, ಮಧ್ಯಾಹ್ನದ ಸಮಯವನ್ನು ಪೂರ್ವಜರಿಗೆ ಸಮರ್ಪಿಸಲಾಗುತ್ತದೆ.

ಶ್ರಾದ್ಧ ಕಾರ್ಯವನ್ನು ಮಧ್ಯಾಹ್ನ 12:00ರ ಸುಮಾರಿಗೆ ನಡೆಸಬಹುದು. 

ಬೆಳಗ್ಗೆ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಮೊದಲು ಪೂರ್ವಜರಿಗೆ ತರ್ಪಣವನ್ನು ಅರ್ಪಿಸಬೇಕು.

ಶ್ರಾದ್ಧದ ದಿನ ಕಾಗೆ ಅಥವಾ ಹಸುವಿಗೆ ಆಹಾರ ಅರ್ಪಿಸಿ ಬ್ರಾಹ್ಮಣರಿಗೆ ಔತಣ ನೀಡುವ ಕ್ರಮವಿದೆ.

ಮಾರ್ಟಿನ್ ಪದದ ರಿಯಲ್ ಅರ್ಥವಿದು