ಮನೆಯ ಈ ದಿಕ್ಕಿನಲ್ಲಿ ತಾಮ್ರದ ಕಳಶ ಇಟ್ಟರೆ ಅದೃಷ್ಟ ಹೆಚ್ಚುತ್ತೆ
By Jayaraj
Jun 10, 2024
Hindustan Times
Kannada
ಮನೆಯಲ್ಲಿ ತಾಮ್ರದ ವಸ್ತುಗಳನ್ನು ಇಡುವುದರಿಂದ ಗ್ರಹದೋಷಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಇದು ಮನೆಯವರಿಗೂ ಮಂಗಳಕರ.
ವಾಸ್ತು ಪ್ರಕಾರ, ತಾಮ್ರವನ್ನು ಮಂಗಳಕರ ಲೋಹವೆಂದು ಪರಿಗಣಿಸಲಾಗಿದೆ. ಹೀಗಾಗಿ ಮನೆಯ ಯಾವ ದಿಕ್ಕಿನಲ್ಲಿ ತಾಮ್ರದ ಕಲಶ ಇಡುವುದು ಸರಿ ಎಂಬುದನ್ನು ತಿಳಿಯೋಣ.
ಯಾವುದೇ ತಾಮ್ರದ ವಸ್ತುವನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡುವುದು ಮಂಗಳಕರ ಎಂದು ಶಾಸ್ತ್ರ ಹೇಳುತ್ತದೆ. ಹೀಗಾಗಿ ತಾಮ್ರದ ಕಲಶವನ್ನು ಈ ದಿಕ್ಕಿಗೆ ಇಡುವುದು ಶ್ರೇಯಸ್ಕರ.
ಧರ್ಮಗ್ರಂಥಗಳ ಪ್ರಕಾರ, ಈ ದಿಕ್ಕನ್ನು ಸೂರ್ಯ ದೇವರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ತಾಮ್ರವು ಸೂರ್ಯನನ್ನು ಪ್ರತಿನಿಧಿಸುತ್ತದೆ.
ಹೀಗಾಗಿ ಪೂರ್ವ ದಿಕ್ಕಿನಲ್ಲಿ ತಾಮ್ರದ ಕಲಶವನ್ನು ಇಡುವುದು ಫಲಪ್ರದ.
ವಾಸ್ತು ಪ್ರಕಾರ ಮನೆಯ ವಾಯುವ್ಯ ದಿಕ್ಕಿನಲ್ಲಿ ತಾಮ್ರದ ಕಲಶ ಅಥವಾ ತಾಮ್ರದ ದೀಪವನ್ನು ಇಡುವುದು ತುಂಬಾ ಶುಭ.
ವಾಯುವ್ಯ ದಿಕ್ಕನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮೀ ದೇವಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ.
ಆಗ್ನೇಯ ದಿಕ್ಕನ್ನು ಅಗ್ನಿ ದೇವರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ತಾಮ್ರದ ಕಲಶವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
(ಈ ಮಾಹಿತಿಯು ನಂಬಿಕೆ, ಧಾರ್ಮಿಕ ಗ್ರಂಥ ಹಾಗೂ ವಿವಿಧ ಮಾಧ್ಯಮಗಳನ್ನು ಆಧರಿಸಿದೆ.)
ಭಾರತ vs ಇಂಗ್ಲೆಂಡ್ ಸರಣಿಯ ಸಂಪೂರ್ಣ ವೇಳಾಪಟ್ಟಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ