ತುಳಸಿ ಮಾಲೆ ಧರಿಸಲು ಯಾವೆಲ್ಲ ನಿಯಮ ಅನುಸರಿಸಬೇಕು?
By Jayaraj
Oct 19, 2024
Hindustan Times
Kannada
ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ರೂಪವೆಂದು ನಂಬಲಾಗುತ್ತದೆ. ತುಳಸಿ ಗಿಡ ನೆಟ್ಟರೆ ನಕಾರಾತ್ಮಕ ಶಕ್ತಿ ಮನೆಯಿಂದ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ಅನೇಕ ಜನರು ತುಳಸಿ ಗಿಡದ ಮಾಲೆ ಧರಿಸುತ್ತಾರೆ. ಆದರೆ ಮಾಲೆ ಧರಿಸಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ. ಆ ನಿಯಮಗಳ ಬಗ್ಗೆ ನಮಗೆ ತಿಳಿಯೋಣ.
ತುಳಸಿ ಮಾಲೆಯನ್ನು ಧರಿಸಿದವರು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುತ್ತಾರೆ.
ತುಳಸಿ ಮಾಲೆಯನ್ನು ಧರಿಸುವವರು ಮಾಂಸ ಮತ್ತು ಮದ್ಯ ಸೇವನೆ ಮಾಡುಂತಿಲ್ಲ. ಅಲ್ಲದೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಕೂಡ ಸೇವಿಸಬಾರದು.
ತುಳಸಿ ಜಪಮಾಲೆಯನ್ನು ಒಮ್ಮೆ ಧರಿಸಿದ ನಂತರ ಅದನ್ನು ಮತ್ತೆ ಮತ್ತೆ ತೆಗೆಯಬಾರದು.
ಮಾಲೆಯನ್ನು ಧರಿಸುವ ಮೊದಲು ಅದನ್ನು ನದಿ ನೀರಿನಲ್ಲಿ ಮುಳುಗಿಸಿ ತೆಗೆಯಬೇಕು. ನಂತರ ಅದನ್ನು ಧರಿಸಬೇಕು ಎಂದು ಹೇಳಲಾಗುತ್ತದೆ.
ತುಳಸಿ ಜಪಮಾಲೆ ಧರಿಸುವವರು ಪ್ರತಿದಿನ ವಿಷ್ಣು ಮಂತ್ರವನ್ನು ಪಠಿಸುತ್ತಾರೆ.
ಕುತ್ತಿಗೆಗೆ ತುಳಸಿ ಮಾಲೆಯನ್ನು ಧರಿಸಲು ಇಷ್ಟವಾಗದಿದ್ದರೆ ಅದನ್ನು ಬಲಗೈಗೆ ಸುತ್ತಿಕೊಳ್ಳಬಹುದು.
ನಿತ್ಯಕ್ರಿಯೆಗಳನ್ನು ಮಾಡುವ ಮೊದಲು ಅದನ್ನು ತೆಗೆದಿಟ್ಟು, ನಂತರ ಗಂಗಾಜಲದಿಂದ ತೊಳೆದು ಧರಿಸುವುದು ವಾಡಿಕೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ