ಈ ರಾಶಿಯವರು ತಮ್ಮ ವರ್ತನೆಯಿಂದ ಎರಡು ಮುಖದ ವ್ಯಕ್ತಿಗಳಂತೆ ಕಾಣುತ್ತಾರೆ
By Rakshitha Sowmya Jun 12, 2024
Hindustan Times Kannada
ಮೇಷ ರಾಶಿಯವರು ದ್ವಂಧ್ವ ಸ್ವಭಾವದವರಾಗಿದ್ದಾರೆ. ವಿವಿಧ ಸನ್ನಿವೇಶಗಳಿಗೆ ಅನುಗುಣವಾಗಿ ಈ ರಾಶಿಯವರು ತಮ್ಮ ವರ್ತನೆಯನ್ನು ಬದಲಿಸುತ್ತಾರೆ.
ಕರ್ಕಾಟಕ ರಾಶಿಯವರು ಬಹಳ ಮೃದು ಸ್ವಭಾವದವರು. ಇಷ್ಟಾದರೂ ಈ ರಾಶಿಯವರು ಭಾವನೆಗಳ ಆಧಾರದ ಮೇಲೆ ತಮ್ಮ ವರ್ತನೆಯನ್ನು ಬದಲಿಸುತ್ತಾರೆ. ಇವರ ಈ ಸ್ವಭಾವವು ನಿಜವಾದ ಭಾವನೆಗಳು, ಉದ್ದೇಶಗಳನ್ನು ಮರೆ ಮಾಚಲು ಕಾರಣವಾಗಬಹುದು.
ಸಾಮರಸ್ಯಕ್ಕಾಗಿ ಶ್ರಮಿಸುವ ಜನರಿವರು. ಶಾಂತಿ ಹಾಗೂ ಸಂಘರ್ಷವನ್ನು ತಪ್ಪಿಸಲು ಆಗ್ಗಾಗ್ಗೆ ತಮ್ಮ ನಿಲುವನ್ನು ಬದಲಿಸುತ್ತಾರೆ. ಎಲ್ಲರನ್ನೂ ಮೆಚ್ಚಿಸುವ ಇವರ ಈ ಪ್ರಯತ್ನದಿಂದ ಈ ಜನರು ಎರಡು ಮುಖದ ವ್ಯಕ್ತಿಗಳಾಗಿ ಕಾಣುವಂತೆ ಮಾಡುತ್ತದೆ.
ಧನಸ್ಸು ರಾಶಿಯವರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು, ಉದ್ದೇಶಗಳನ್ನು ಮರೆ ಮಾಚುವ ಸ್ವಭಾವದವರು. ಆದರೆ ಕೆಲವೊಮ್ಮೆ ಅವರು ತಮ್ಮ ಭಾವನೆಗಳನ್ನು ಹೊರ ಹಾಕುವುದರಿಂದ 2 ಮುಖದ ವ್ಯಕ್ತಿಗಳಂತೆ ಕಾಣುತ್ತಾರೆ
ಮೀನ ರಾಶಿಯವರು ಮತ್ತೊಬ್ಬರ ಬಗ್ಗೆ ಬಹಳ ಸಹಾನುಭೂತಿ ಹೊಂದಿರುವವರು. ಇವರ ಈ ವರ್ತನೆಯಿಂದ ಮೀನ ರಾಶಿಯವರು ಸನ್ನಿವೇಶಕ್ಕೆ ತಕ್ಕಂತೆ ಭಾವನೆಗಳನ್ನು ಬದಲಿಸುವುದರಿಂದ ಎರಡು ಮುಖದ ವ್ಯಕ್ತಿತ್ವದವರಾಗಿ ಕಾಣಿಸಿಕೊಳ್ಳುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಐಪಿಎಲ್: ಒಂದೇ ಮೈದಾನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರು