ಅರಿಸಿನ, ಕುಂಕುಮದಿಂದ ಸ್ವಸ್ತಿಕ್‌ ಚಿಹ್ನೆ ಬರೆಯುವ ಶುಭಫಲಗಳು

By Rakshitha Sowmya
Dec 30, 2024

Hindustan Times
Kannada

ಹಿಂದೂ ಧರ್ಮದಲ್ಲಿ ಸ್ವಸ್ತಿಕ್‌ ಚಿಹ್ನೆಗೆ ವಿಶೇಷ ಪ್ರಾಮುಖ್ಯತೆ ಇದೆ

ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಮನೆ ಬಾಗಿಲಿನ ಮೇಲೆ ಸ್ವಸ್ತಿಕ್‌ ಬರೆಯುವುದು ಬಹಳ ಒಳ್ಳೆಯದು

ಅರಿಸಿನ, ಕುಂಕುಮದಿಂದ ಕೆಲವರು ಸ್ವಸ್ತಿಕ್‌ ಚಿಹ್ನೆ ಬಿಡಿಸುತ್ತಾರೆ ಇದರಿಂದ ಏನು ಫಲ, ಇಲ್ಲಿದೆ ಮಾಹಿತಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸ್ವಸ್ತಿಕ್‌ ಚಿಹ್ನೆ, ಮನೆಗೆ ಅದೃಷ್ಟವನ್ನು ತರುತ್ತದೆ

ಅದರಲ್ಲೂ ಮನೆಯ ಮುಖ್ಯದ್ವಾರ ಹಾಗೂ ದೇವರ ಕೋಣೆಯ ಬಾಗಿಲಿನಲ್ಲಿ ಸ್ವಸ್ತಿಕ್‌ ಚಿಹ್ನೆ ಬರೆಯುವುದು ಬಹಳ ಶುಭ

ಸ್ವಸ್ತಿಕ್‌ ಚಿಹ್ನೆಯನ್ನು ಬರೆಯುವುದರಿಂದ ಮನೆಗೆ ಸದಾ ಶುಭ ಉಂಟಾಗುತ್ತದೆ, ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ

ಸ್ವಸ್ತಿಕ್‌ ಚಿಹ್ನೆ ಬಿಡಿಸುವುದರಿಂದ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ

ಸ್ವಸ್ತಿಕ್‌ ಚಿಹ್ನೆಯು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ, ಧನಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ

ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ಹೆಚ್ಚುತ್ತದೆ, ಆರೋಗ್ಯ ಸುಧಾರಿಸುತ್ತದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬಿಗ್‌ಬಾಸ್‌ ಕನ್ನಡದಲ್ಲಿ ಈ ಬಾರಿ ಮೋಕ್ಷಿತಾ ಪೈ ಟ್ರೋಫಿ ಗೆಲ್ಲಬಹುದೇ?