Car Price Hike: ಕಾರು ಖರೀದಿಸುವವರಿಗೆ ಬೆಲೆ ಏರಿಕೆ ಬಿಸಿ; ಏಪ್ರಿಲ್‌ನಿಂದ ಬೆಲೆ ಹೆಚ್ಚಳ
By Kiran Kumar I G Mar 25, 2025
Hindustan Times Kannada
ಹೊಸ ಹಣಕಾಸು ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, ಹಲವಾರು ವಾಹನ ತಯಾರಕರು ಬೆಲೆ ಏರಿಕೆಯನ್ನು ಘೋಷಿಸಿದ್ದಾರೆ.
ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಏಪ್ರಿಲ್‌ನಿಂದ ಬೆಲೆ ಹೆಚ್ಚಿಸಲಿದೆ ಆದರೆ ಹೆಚ್ಚಳದ ಪ್ರಮಾಣವನ್ನು ಇನ್ನೂ ಹೇಳಿಲ್ಲ.
ಟಾಟಾ ಮೋಟಾರ್ಸ್ - ವಾಹನ ತಯಾರಕ ಕಂಪನಿಯು ತನ್ನ ಐಸಿಇ ಮತ್ತು ಇವಿ ಶ್ರೇಣಿಯಲ್ಲಿ ಬೆಲೆಗಳನ್ನು 3% ವರೆಗೆ ಹೆಚ್ಚಿಸಲಿದೆ.
ಕಿಯಾ- ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿ ಕಿಯಾ ಬೆಲೆಯನ್ನು 3% ವರೆಗೆ ಹೆಚ್ಚಿಸಲಿದೆ
ಹ್ಯುಂಡೈ - ವಾಹನ ತಯಾರಕ ಕಂಪನಿಯು ತನ್ನ ಶ್ರೇಣಿಯಲ್ಲಿ 3% ವರೆಗೆ ಬೆಲೆಗಳನ್ನು ಹೆಚ್ಚಿಸುತ್ತಿದೆ.
ಹೋಂಡಾ - ಜಪಾನಿನ ಕಾರು ತಯಾರಕ ಕಂಪನಿಯು ಹೆಚ್ಚಳದ ಪ್ರಮಾಣವನ್ನು ನಿರ್ದಿಷ್ಟಪಡಿಸಿಲ್ಲ, ಆದರೆ ಇದು ಅಮೇಜ್, ಸಿಟಿ ಮತ್ತು ಎಲಿವೇಟ್ ಸೇರಿದಂತೆ ಎಲ್ಲಾ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ.
ರೆನಾಲ್ಟ್ - ಫ್ರೆಂಚ್ ವಾಹನ ತಯಾರಕ ಕ್ವಿಡ್, ಟ್ರೈಬರ್ ಮತ್ತು ಕಿಗರ್‌ನಲ್ಲಿ 2% ವರೆಗೆ ಬೆಲೆಗಳನ್ನು ಹೆಚ್ಚಿಸಲಿದೆ.
ಮಹೀಂದ್ರಾ - ಭಾರತೀಯ ಆಟೋ ದೈತ್ಯ ಎಲೆಕ್ಟ್ರಿಕ್ ಮತ್ತು ಐಸಿಇ ಮಾದರಿಗಳನ್ನು ಒಳಗೊಂಡ ತನ್ನ ಎಸ್ ಯುವಿ ಶ್ರೇಣಿಯ ಬೆಲೆಗಳನ್ನು ಹೆಚ್ಚಿಸಲಿದೆ.
ಬಿಎಂಡಬ್ಲ್ಯು ಮತ್ತು ಮಿನಿ - ಐಷಾರಾಮಿ ಕಾರು ಬ್ರಾಂಡ್ ಗಳು ತಮ್ಮ ಮಾದರಿ ಶ್ರೇಣಿಯಲ್ಲಿ ಬೆಲೆಗಳನ್ನು 3% ವರೆಗೆ ಹೆಚ್ಚಿಸಲಿವೆ.
ಏಪ್ರಿಲ್ ತಿಂಗಳಿನಿಂದ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು ಕಂಪನಿಗಳು ಏರಿಕೆ ಮಾಡುವುದಾಗಿ ಘೋಷಿಸಿವೆ.