ಕಿಯಾ ಇಂಡಿಯಾ ಇತ್ತೀಚೆಗೆ ಹೊಸ ಸಿರೋಸ್ ಸಣ್ಣ ಎಸ್‌ಯುವಿ ಅನಾವರಣ ಮಾಡಿತ್ತು. ಇದರ ಬುಕ್ಕಿಂಗ್ ಇದೀಗ ಆರಂಭವಾಗಿದೆ.
ಜನವರಿ 17ರಂದು ಭಾರತ್ ಮೊಬಿಲಿಟಿ 2025ರಲ್ಲಿ ಈ ಕಾರು ಭಾರತದಲ್ಲಿ ಲಾಂಚ್ ಆಗಲಿದೆ. ಇದಕ್ಕೂ ಮುನ್ನವೇ ಈ ಕಾರಿನ ಪ್ರೀ ಬುಕ್ಕಿಂಗ್ ಆರಂಭವಾಗಿದೆ.
ನೀವು ಕಿಯಾ ಸಿರೋಸ್ ಅನ್ನು ಆನ್‌ಲೈನ್ ಮೂಲಕ ಅಥವಾ ಕಿಯಾ ಡೀಲರ್‌ಶಿಪ್‌ಗಳಲ್ಲಿ 25,000 ರೂಪಾಯಿ ಟೋಕನ್ ಅಡ್ವಾನ್ಸ್ ನೀಡಿ ಬುಕ್ಕಿಂಗ್ ಮಾಡಬಹುದು.
ಕಿಯಾ ಸಿರೋಸ್ ನೋಡಲು ಭಿನ್ನ ವಿನ್ಯಾಸ ಹೊಂದಿದೆ. ಕಿಯಾ ಇವಿ 9 ಎಲೆಕ್ಟ್ರಿಕ್‌ನಿಂದ ಸ್ಪೂರ್ತಿ ಪಡೆದ ವಿನ್ಯಾಸ ಹೊಂದಿದೆ. ನೋಡಲು ಎತ್ತರದ ಹುಡುಗನಂತೆ ಕಾಣಿಸುತ್ತದೆ.
ಸಿರೋಸ್ ಎಸ್‌ಯುವಿಯು 17 ಇಂಚಿನ ಅಲಾಯ್ ವೀಲ್ ಹೊಂದಿದೆ. ಎಲ್ ಆಕಾರದ ಎಲ್ಇಡಿ ಟೈಲ್ ಲೈಟ್ ಗಳು ಮತ್ತು ರೂಫ್-ಮೌಂಟೆಡ್ ಸ್ಪಾಯ್ಲರ್ ಗಮನ ಸೆಳೆಯುತ್ತವೆ.
ಲೆವೆಲ್ 2 ಎಡಿಎಎಸ್ ಸುರಕ್ಷತೆ ಹೊಂದಿದೆ. ಪನೋರಮಿಕ್ ಸನ್ ರೂಫ್, ಆಂಬಿಯೆಂಟ್ ಲೈಟಿಂಗ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಸೇರಿದಂತೆ ಸಾಕಷ್ಟು ಫೀಚರ್‌ಗಳನ್ನು ಹೊಂದಿರಲಿದೆ.
ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಸೀಟುಗಳನ್ನು ಹೊಂದಿದೆ. ಎರಡನೇ ಸಾಲಿನಲ್ಲಿ ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ವೆಂಟಿಲೇಷನ್ ಫಂಕ್ಷನ್ ನೀಡಲಾಗಿದೆ.
ಇದು ಎರಡು ಎಂಜಿನ್ ಆಯ್ಕೆಗಳಲ್ಲಿ ದೊರಕತುತದೆ. 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನಲ್ಲಿ ದೊರಕುತ್ತವೆ. ಇವು ಮ್ಯಾನುಯಲ್ ಮತ್ತು ಸ್ವಯಂಚಾಲಿತ ಗಿಯರ್‌ಬಾಕ್ಸ್ ಹೊಂದಿವೆ.
ಕಿಯಾ ಸಿರೋಸ್ ಕಾರಿನ ದರ ಎಷ್ಟಿರಲಿದೆ ಎಂಬ ವಿವರ ಲಭ್ಯವಿಲ್ಲ. ಕಂಪನಿಯು ಕಾರಿನ ದರವನ್ನು ಫೆಬ್ರವರಿ 1, 2025 ರಂದು ಬಹಿರಂಗಪಡಿಸಲಿದೆ.