ಯಮಹಾ ಆರ್ 3 ಮತ್ತು ಎಂಟಿ-03 ಬೈಕುಗಳ ದರವನ್ನು ಫೆಬ್ರವರಿ 1ರಿಂದ ಜಾರಿಗೆ ಬರುವಂತೆ 1.10 ಲಕ್ಷಗಳವರೆಗೆ ಕಡಿತಗೊಳಿಸಲಾಗಿದೆ.
ಫೆಬ್ರವರಿ 1ರಿಂದ ಯಮಹಾ ಎಂಟಿ-03 ಬೈಕ್‌ನ ಎಕ್ಸ್ ಶೋರೂಂ ದರ 3.50 ಲಕ್ಷ ರೂಪಾಯಿ ಇರಲಿದೆ.
ಯಮಹಾ ಆರ್3 ಬೈಕಿನ ದರವೂ ಕಡಿಮೆಯಾಗಿದೆ. ಫೆಬ್ರವರಿ 1ರಿಂದ ಈ ಬೈಕ್‌ನ ದರ 3.60 ಲಕ್ಷ ರೂಪಾಯಿ. ಇದು ಎಕ್ಸ್ ಶೋರೂಂ ದರ.
ಆರ್3 ಈಗ ಎಪ್ರಿಲಿಯಾ ಆರ್ ಎಸ್ 457 ಬೈಕಿಗಿಂತ ಅಗ್ಗವಾಗಿದೆ. ಕೆಟಿಎಂ ಆರ್ ಸಿ 390ಗಿಂತ 39,000 ರೂಪಾಯಿ ದುಬಾರಿಯಾಗಿದೆ.
ಯಮಹಾ ಕಂಪನಿಯು ವಿತರಕರ ಬಳಿ ಮಾರಾಟವಾಗದೆ ಉಳಿದಿರುವ ದಾಸ್ತಾನು ಅನ್ನು ಖಾಲಿ ಮಾಡುವ ಸಲವಾಗಿ ದರ ಕಡಿಮೆ ಮಾಡಿದೆ. ಇನ್ಮುಂದೆ ಆಗಮಿಸುವ ಹೊಸ ಬೈಕ್‌ಗಳಿಗೆ ದಾರಿ ಮಾಡಿಕೊಡುವ ಉದ್ದೇಶವೂ ಇದರ ಹಿಂದೆ ಇದೆ.
ಎಂಟಿ-03 ಮತ್ತು ಆರ್3 ಒಂದೇ ರೀತಿಯ ಭಾಗಗಳನ್ನು ಹೊಂದಿರುವ ಒಂದೇ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ ಬೈಕ್‌ಗಳಾಗಿವೆ.
ಈ ಬೈಕುಗಳು ಯುಎಸ್ ಡಿ ಫೋರ್ಕ್ ಗಳು ಮತ್ತು ಮೊನೊಶಾಕ್ ಹೊಂದಿವೆ. ಡ್ಯುಯಲ್-ಚಾನೆಲ್ ಎಬಿಎಸ್ ಜತೆಗೆ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿವೆ.
321 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದ್ದು, 41.4 ಬಿಎಚ್‌ಪಿ ಪವರ್ ಮತ್ತು 29.6 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.
ಆರ್ 3 ಮತ್ತು ಎಂಟಿ -03 ಒಂದೇ ರೀತಿಯ ಡಿಜಿಟಲ್ ಕ್ಲಸ್ಟರ್ ಹೊಂದಿವೆ.