ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಹೊಸ ಕಾರು ಮತ್ತು ಬೈಕ್‌ಗಳು

By Praveen Chandra B
Jan 31, 2025

Hindustan Times
Kannada

ಈ ವರ್ಷದ ಆರಂಭದಿಂದ ಹಲವು ಹೊಸ ಬೈಕ್‌, ಕಾರುಗಳು ಬಿಡುಗಡೆಯಾಗಿವೆ. ವಿಶೇಷವಾಗಿ ದೆಹಲಿ ವಾಹನ ಪ್ರದರ್ಶನದಲ್ಲಿ ಹಲವು ವಾಹನಗಳು ಲಾಂಚ್‌ ಆಗಿವೆ.

ಫೆಬ್ರವರಿ 2025ರಲ್ಲಿ ಬಿಡುಗೆಯಾಗಲಿರುವ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ವಿವರ ತಿಳಿಯೋಣ. 

ಕಿಯಾ ಸಿರೋಸ್ : ಕಿಯಾ ಕಂಪನಿಯು 4 ಮೀಟರ್‌ಗಿಂತ ಕಡಿಮೆ ಗಾತ್ರದ ಎಸ್‌ಯುವಿ ಪರಿಚಯಿಸಲಿದೆ. ಇದು ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸೂಚನೆಯಿದೆ.

ಆಡಿ ಆರ್‌ಎಸ್‌ ಕ್ಯೂ 8 ಪರ್ಫಾಮೆನ್ಸ್‌:‌ ಹೊಸ ವಿನ್ಯಾಸ, ಫೀಚರ್‌ಗಳ ಜತೆಗೆ ಈ ಆಡಿ ಕಾರಿನ ಪರ್ಫಾರೆನ್ಸ್‌ ಕೂಡ ಉತ್ತಮವಾಗಿರಲಿದೆ. 

ಆಸ್ಟನ್ ಮಾರ್ಟಿನ್ ವ್ಯಾನ್ ಕ್ವಿಶ್: ಕಂಪನಿಯು ಜಾಗತಿಕವಾಗಿ ಒಟ್ಟು ಒಂದು ಸಾವಿರ ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ. ಇದು  ವಿ 12 ಮೋಟರ್ ಮತ್ತು 1,000 ಎನ್ಎಂ ಟಾರ್ಕ್  ನೀಡಲಿದೆ.

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಕೆಟಿಎಂ ಕಂಪನಿಯು ಸಜ್ಜಾಗಿದೆ .

2025ರ ಡುಕಾಟಿ ಪಾನಿಗಲೆ ವಿ4: ಪರಿಷ್ಕೃತ  ಪಾನಿಗಲೆ ವಿ4 ಬೈಕ್ ನೋಡಲು ಆಕರ್ಷಕವಾಗಿದ್ದು, ಹೊಸ ಸ್ವಿಂಗ್ ಆರ್ಮ್ ಮತ್ತು ಹೊಸ ಟಿಎಫ್‌ಟಿ ಡಿಸ್‌ಪ್ಲೇ ಮುಂತಾದ ಫೀಚರ್‌ಗಳನ್ನು ಹೊಂದಿದೆ.

ಡುಕಾಟಿ ಡೆಸರ್ಟ್ ಎಕ್ಸ್ ಡಿಸ್ಕವರಿ:- ಡೆಸರ್ಟ್ ಎಕ್ಸ್ ಕುಟುಂಬದಲ್ಲಿ ಆಗಮಿಸುವ ಈ ಬೈಕ್ ಹಲವು ಹೆಚ್ಚುವರಿ ಫೀಚರ್‌ಗಳನ್ನು ಹೊಂದಿರಲಿದೆ.

ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 650: ಹೊಸ ಕ್ಲಾಸಿಕ್ 650 ಟ್ವಿನ್ ಬೈಕನ್ನು 2025ರ ಫೆಬ್ರವರಿಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು