ಪ್ರಪಂಚದ ವಿವಿಧ ಭಾಷೆಗಳ ಸೂರ್ಯ ಎಂಬ ಅರ್ಥ ಬರುವ ಗಂಡು ಮಕ್ಕಳ ಹೆಸರುಗಳು  

By Reshma
May 04, 2025

Hindustan Times
Kannada

ಪ್ರಪಂಚದ ಬೇರೆ ಬೇರೆ ಭಾಷೆಗಳ, ಸೂರ್ಯ ಎಂಬ ಅರ್ಥ ಬರುವ ಗಂಡು ಮಗುವಿಗೆ ಇರಿಸಬಹುದಾದ ಸುಂದರ ಹೆಸರುಗಳ ಪಟ್ಟಿ ಇಲ್ಲಿದೆ 

PC: Canva

ವಿವಾಸನ್: ಇದೊಂದು ಸಂಸ್ಕೃತ ಪದ. ಇದು ಜ್ಞಾನೋದಯ, ದೈವಿಕ ಬೆಳಕು, ಸೂರ್ಯನ ಕಿರಣ ಎಂಬೆಲ್ಲಾ ಅರ್ಥವನ್ನು ಹೊಂದಿದೆ 

ಸಾವರ್‌: ಇದು ಕೂಡ ಸಂಸ್ಕೃತ ಪದ. ಇದು ಸೂರ್ಯ, ಬೆಳಿಗ್ಗೆ, ಮುಂಜಾವು ಎಂಬ ಅರ್ಥ ನೀಡುವ ಹೆಸರು. ಹೊಸ ಆರಂಭ ಎನ್ನುವುದರ ಸೂಚಕವೂ ಹೌದು 

PC: Canva

ಅನಾಟೊಲ್‌: ಇದು ಗ್ರೀಕ್ ಪದ. ಇದರ ಅರ್ಥ ಉದಯಿಸುತ್ತಿರುವ ಸೂರ್ಯ ಎಂದು.  ಇದು ಹೊಸ ಭರವಸೆ, ಆರಂಭವನ್ನು ಸೂಚಿಸುತ್ತದೆ 

PC: Canva

ತಾನೆರ್: ಇದು ಟರ್ಕಿಶ್ ಪದ. ಇದು ಕೂಡ ಸೂರ್ಯೋದಯವನ್ನು ಸೂಚಿಸುತ್ತದೆ. ಹೊಸ ಆರಂಭ ಎಂಬ ಅರ್ಥವೂ ಈ ಹೆಸರಿಗಿದೆ

PC: Canva

ಸ್ಯಾಮನ್ಸ್: ಸೂರ್ಯನ ಮಗು ಎಂಬ ಅರ್ಥ ಹೆಸರಿಗಿದೆ. ಇದು ಅಪಾರ ಶಕ್ತಿ ಎಂಬುದನ್ನು ಸೂಚಿಸುತ್ತದೆ. ಇದು ಹೀಬ್ರೂ ಭಾಷೆಯ ಪದ 

PC: Canva

ಸೈರಸ್‌: ಇದು ಪರ್ಷಿಯನ್ ಪದ. ಸೂರ್ಯ ಹಾಗೂ ಸಿಂಹಾಸನ ಎಂಬ ಎರಡು ಅರ್ಥ ಈ ಹೆಸರಿಗಿದೆ. ಇದು ನಾಯಕತ್ವ, ಸೂರ್ಯನ ಶಕ್ತಿಯನ್ನು ಪ್ರತಿಪಾದಿಸುತ್ತದೆ 

PC: Canva

ಎಲಿಯೊ: ಇದು ಸ್ಪ್ಯಾನಿಷ್ ಪದ. ಸೂರ್ಯ, ಭರವಸೆ ನೀಡುವ ಕಿರಣಗಳು, ಬೆಳಕು ಎಂಬೆಲ್ಲಾ ಅರ್ಥವನ್ನು ಹೊಂದಿದೆ 

PC: Canva

ಸೋಲ್‌: ಲ್ಯಾಟಿನ್ ಹಾಗೂ ಸ್ಪ್ಯಾನಿಷ್ ಭಾಷೆಯ ಆ ಪದದ ಅರ್ಥ ಸೂರ್ಯ ಎಂದು

PC: Canva

ಅಮತೆರಸು: ಇದು ಜಪಾನ್‌ನ ಸೂರ್ಯ ದೇವತೆಯ ಹೆಸರು. ದೈವಿಕ ಬೆಳಕು, ಶಾಂತಿ ಎಂಬ ಅರ್ಥವನ್ನು ಇದು ಹೊಂದಿದೆ 

PC: Canva

ಇಂಕಾನ್‌: ಸೂರ್ಯ ದೇವರ ಹೆಸರು.ಇದು ಸೂರ್ಯನ ಅತೀಂದ್ರಿಯ ಶಕ್ತಿಯನ್ನು ಪ್ರತಿನಿಧಿಸುತ್ತದೆ 

PC: Canva

ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು