ಮಹಾನಟಿ ಗಗನಾಳಿಗೆ ಕಮಾನ್‌ ಡಾರ್ಲಿಂಗ್‌ ಎಂದ ಬಾಳು ಬೆಳಗುಂದಿ 

By Praveen Chandra B
Feb 01, 2025

Hindustan Times
Kannada

ಜೀ ಕನ್ನಡ ವಾಹಿನಿಯಲ್ಲಿ ಮಹಾ ಮನರಂಜನೆ ಕಾರ್ಯಕ್ರಮ ಶನಿವಾರ ರಾತ್ರಿ 7.30ಕ್ಕೆ ನಡೆಯಲಿದೆ.

ಈ ಕಾರ್ಯಕ್ರಮದ ಪ್ರೊಮೊವನ್ನು ಜೀಕನ್ನಡ ಬಿಡುಗಡೆ ಮಾಡಿದೆ. ಇಲ್ಲಿ ಪ್ರೇಕ್ಷಕರಿಗೆ ಅಚ್ಚರಿಯಾಗುವಂತಹ ದೃಶ್ಯವಿದೆ. 

'ಕಮಾನು ಡಾರ್ಲಿಂಗ್' ಅಂತ ಹಾವೇರಿಯ ಬಾಳು ಬೆಳಗುಂದಿ ಜೊತೆ ಸೊಗಸಾಗಿ ಹಾಡಿ ಗಗನ ಮನಗೆದ್ದಿದ್ದಾರೆ.

ಸರಿಗಮಪ 'ಮಹಾ ಮನರಂಜನೆ'ಯಲ್ಲಿ ಬಾಳು ಬೆಳಗುಂದಿ ಮತ್ತು ಗಗನಾರ ಡ್ಯಾನ್ಸ್‌, ಹಾಡು ನೋಡಬಹುದು. 

ಈ ಬಾರಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಬಾಳು ಬೆಳಗುಂದಿ ಎಲ್ಲರ ಗಮನ ಸೆಳೆದಿದ್ದಾರೆ. 

ಯೂಟ್ಯೂಬ್‌ನಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಬಾಳು ಬೆಳಗುಂದಿ ಜೀ ಕನ್ನಡ ವಾಹಿನಿಯಲ್ಲಿ ಈಗ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

ಬಾಳು ಬೆಳಗುಂದಿ ಮೂಲತಃ ಹಾವೇರಿಯ ಕತ್ರಿಕೊಪ್ಪ ಎಂಬ ಹಳ್ಳಿಯವರು. ಇವರ ಶಾರ್ಟ್‌ ವಿಡಿಯೋಗಳು ಮಾತ್ರವಲ್ಲದೆ ಇವರ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ನೂರಾರು ಜನಪದ ಶೈಲಿಯ ಹಾಡುಗಳಿವೆ. 

ಚೋಳ ರಾಜವಂಶದ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾಗಿವೆ. ಪುರಾತನ ಶಿವನ ದೇವಾಲಯಗಳು ಸೇರಿ ಚೋಳರ ಕಾಲದ ನೋಡಲೇಬೇಕಾದ ದೇವಾಲಯಗಳ ವಿವರ ಇಲ್ಲಿದೆ