ಬಿಗ್‌ ಬಾಸ್‌ ಶೋ ಮೇಲೆಯೇ ಅನುಮಾನ ಮೂಡಿಸಿದ ಡ್ರೋನ್‌ ಪ್ರತಾಪ್‌ ಆಡಿದ ಆ ಮಾತು!

By Manjunath B Kotagunasi
Jan 25, 2025

Hindustan Times
Kannada

ಬಿಗ್‌ ಬಾಸ್‌ ಕನ್ನಡ 11ರ ಫಿನಾಲೆಗೆ ವೇದಿಕೆ ಸಿದ್ಧವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ವಿನ್ನರ್‌ ಘೋಷಣೆ ಆಗಲಿದೆ

ಈ ನಡುವೆ ಇದೇ ಶೋನ ಕಳೆದ ಸೀಸನ್‌ ರನ್ನರ್‌ ಆಗಿದ್ದ ಡ್ರೋನ್‌ ಪ್ರತಾಪ್ ತಮ್ಮ ಇಷ್ಟದ ಸ್ಪರ್ಧಿಯನ್ನು ಹೆಸರಿಸಿದ್ದಾರೆ

ಬಿಗ್‌ ಬಾಸ್‌ ಮನೆಯ ಹಳ್ಳಿ ಹೈದ, ಹಾಡು ಹಕ್ಕಿ ಹನುಮಂತ ಲಮಾಣಿಗೆ ಬೆಂಬಲ ಸೂಚಿಸಿ ವಿಡಿಯೋ ಹಂಚಿಕೊಂಡಿದ್ದಾರೆ ಪ್ರತಾಪ್

ಬಡವರ ಮನೆ ಮಕ್ಕಳು ಬೆಳೀಬೇಕು ಎನ್ನುತ್ತ ಹನುಮಂತನಿಗೆ ವೋಟ್‌ ಮಾಡಿ ಎಂದು ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ

ಇದೇ ವೇಳೆ ಇನ್ನೊಂದು ಮಾತೂ ಅವರ ಬಾಯಿಂದ ಬಂದಿದೆ. ಆ ಮಾತೇ ಇದೀಗ ಬಿಗ್‌ ಬಾಸ್‌ ಶೋ ಮೇಲೆ ಅನುಮಾನ ಮೂಡಿಸಿದೆ

ವೋಟಿಂಗ್‌ ಪ್ರಕಾರ ಹೋಗುವುದಾದರೆ, ಹನುಮಂತು ಫಿಕ್ಸ್‌ ಗೆದ್ದೇ ಗೆಲ್ತಾರೆ ಎಂದು ಒತ್ತಿ ಒತ್ತಿ ಹೇಳಿದ್ದಾರೆ ಪ್ರತಾಪ್‌

ಹಾಗಾದರೆ, ವಿಜೇತರನ್ನು ವೋಟಿಂಗ್‌ ಪ್ರಕಾರ ಘೋಷಣೆ ಮಾಡಲ್ವ? ಬೇಕಾದವರನ್ನು ಆಯ್ಕೆ ಮಾಡಲಾಗುತ್ತಾ? 

ಡ್ರೋನ್‌ ಪ್ರತಾಪ್‌ ಹೀಗೆ ಒತ್ತಿ ಒತ್ತಿ ಹೇಳುವುದರ ಹಿಂದಿನ ಉದ್ದೇಶ ಏನಿರಬಹುದು? ಸದ್ಯ ಪ್ರತಾಪ್‌ ಮಾತು ಹಲವು ಅನುಮಾನಗಳಿಗೆ ಕಾರಣವಾಗಿದೆ

ಹನುಮಂತ ಲಮಾಣಿ, ಉಗ್ರಂ ಮಂಜು, ರಜತ್‌ ಕಿಶನ್‌, ತ್ರಿವಿಕ್ರಮ್‌, ಭವ್ಯಾ ಗೌಡ ಮತ್ತು ಮೋಕ್ಷಿತಾ ಫಿನಾಲೆ ರೇಸ್‌ನಲ್ಲಿದ್ದಾರೆ

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು