ಈ ಥರ ಟ್ರೆಂಡಿ ಲಿಪ್‌ಸ್ಟಿಕ್ ಹಚ್ಚಿಕೊಂಡ್ರೆ ಎಲ್ರೂ ನಿಮ್ಮನ್ನೇ ನೋಡ್ತಾರೆ

By Jayaraj
May 06, 2024

Hindustan Times
Kannada

ಲಿಪ್‌ಸ್ಟಿಕ್ ಟ್ರೆಂಡ್‌ ವೇಗವಾಗಿ ಬದಲಾಗುತ್ತಿರುತ್ತವೆ. ಕೆಲವೊಮ್ಮೆ ಡಾರ್ಕ್‌, ಇನ್ನೂ ಕೆಲವೊಮ್ಮೆ ಲೈಟ್‌ ಶೇಡ್‌ ಬಳಸಲಾಗುತ್ತದೆ.

ಡಾರ್ಕ್ ಔಟ್‌ಫಿಟ್‌ ಧರಿಸಿದ್ದರೆ ಬೋಲ್ಡ್ ಲಿಪ್‌ಗಳು ಕ್ಲಾಸಿ ಲುಕ್ ನೀಡುತ್ತದೆ. ಲಿಪ್‌ಸ್ಟಿಕ್ ಹಚ್ಚಿದರೆ ಮೇಕ್ಅಪ್‌ಗ ಪೂರ್ಣಗೊಂಡಂತೆ.

ನಿಮಗೆ ಡಾರ್ಕ್ ಲಿಪ್‌ಸ್ಟಿಕ್‌ ಇಷ್ಟವಾದರೆ, ನಿಮಗೆ ಕೆಲವೊಂದು ಹೊಸ ಶೇಡ್‌ಗಳ ಕುರಿತು ನಾವು ಹೇಳುತ್ತೇವೆ.

ಇತ್ತೀಚಿನ ದಿನಗಳಲ್ಲಿ ವೈನ್ ಬಣ್ಣದ ಲಿಪ್‌ಸ್ಟಿಕ್‌ ಸಾಕಷ್ಟು ಟ್ರೆಂಡ್ ಆಗಿದೆ. ಡಾರ್ಕ್ ಬಟ್ಟೆಗಳನ್ನು ಧರಿಸಿದಾಗ ನೀವು ವೈನ್ ಕಲರ್‌ ಹಚ್ಚಬಹುದು.

ಬೋಲ್ಡ್‌ ಕೆಂಪು ಬಣ್ಣವು ಎಲ್ಲಾ ರೀತಿಯ ಉಡುಗೆಗಳಿಗೂ ಸರಿ ಹೊಂದುತ್ತದೆ. ಹೀಗಾಗಿ ಈ ಆಯ್ಕೆ ನಿಮ್ಮಲ್ಲಿರಲಿ.

ಮರೂನ್ ಬಣ್ಣದ ಲಿಪ್ ಸ್ಟಿಕ್ ಕೂಡ ಕ್ಲಾಸಿ ಲುಕ್ ಕೊಡುತ್ತದೆ. ಸೀರೆ ಅಥವಾ ಸೂಟ್ ಧರಿಸಿದಾಗ ಮೆರೂನ್ ಕಲರ್ ಶೇಡ್ ಬೆಸ್ಟ್‌ ಆಯ್ಕೆ

ಕಾಫಿ ಬಣ್ಣದ ಲಿಪ್‌ಸ್ಟಿಕ್ ಕಪ್ಪು ಅಥವಾ ಡಾರ್ಕ್ ಬಟ್ಟೆಗಳಿಗೆ ಚೆನ್ನಾಗಿ ಕಾಣುತ್ತದೆ.

ನೀವು ಗುಲಾಬಿ ಬಣ್ಣದ ಡಾರ್ಕ್‌ ಲಿಪ್‌ಸ್ಟಿಕ್ ಕೂಡಾ ಹಚ್ಚಬಹುದು. ಇದು ಲೈಟ್‌ ಹಾಗೂ ಡಾರ್ಕ್‌ ಬಣ್ಣದ ಎರಡೂ ಥರಹದ ಉಡುಪುಗಳಿಗೆ ಒಪ್ಪುತ್ತದೆ.

ಕಡು ಕಂದು ಬಣ್ಣದ ಲಿಪ್‌ಸ್ಟಿಕ್ ಕೂಡ ಟ್ರೆಂಡ್‌ ಆಗುತ್ತಿದೆ. ಕ್ಯಾಶುಯಲ್ ಬಟ್ಟೆಗಳ ಮೇಲೆ ಇದು ಚೆನ್ನಾಗಿ ಕಾಣುತ್ತದೆ.

ಚೆರ್ರಿ ಕೆಂಪು ಬಣ್ಣದ ಲಿಪ್‌ಸ್ಟಿಕ್ ಅನ್ನು ಯಾವುದೇ ಬೋಲ್ಡ್ ಉಡುಪಿಗೂ ಹಚ್ಚಬಹುದು. ಇದು ಗ್ಲಾಮರಸ್ ಲುಕ್ ನೀಡುತ್ತದೆ

ಆರ್‌ಸಿಬಿ ನಾಯಕ ಫಾಫ್‌ ಡುಪ್ಲೆಸಿಸ್ ಪತ್ನಿ ಫೋಟೋಸ್