ಚಳಿಗೆ ಅತಿ ಬಿಸಿನೀರಿನ ಸ್ನಾನದಿಂದ ಈ ಅಪಾಯಗಳಿವೆ
By Jayaraj
Dec 01, 2024
Hindustan Times
Kannada
ಚಳಿಗಾಲದಲ್ಲಿ ಜೋರಾದ ಚಳಿಗೆ ಕೆಲವರು ಅತಿಯಾದ ಬಿಸಿನೀರಿನಿಂದ ಸ್ನಾನ ಮಾಡುತ್ತಾರೆ. ಇದರಿಂದ ಚಳಿ ಕಡಿಮೆಯಾದ ಅನುಭವವಾಗುತ್ತದೆ.
ಆದರೆ, ಸ್ನಾನಕ್ಕೆ ಅತಿಯಾಗಿ ಬಿಸಿಯಾದ ನೀರು ಬಳಸುವುದರಿಂದ ದೇಹಕ್ಕೆ ಒಳ್ಳೆಯದಲ್ಲಿ. ಇದರ ಅಪಾಯಗಳು ಹೀಗಿವೆ.
ಬಿಸಿನೀರಿನ ಸ್ನಾನದಿಂದ ಚರ್ಮವು ಅತಿಯಾಗಿ ತೆರೆದುಕೊಂಡರೆ ಉರಿಯೂತಕ್ಕೆ ಕಾರಣವಾಗಬಹುದು.
ಚಳಿಗಾಲದಲ್ಲಿ ಅತಿಯಾದ ಬಿಸಿನೀರಿನ ಬಳಕೆಯು ನಿಮ್ಮ ಚರ್ಮವನ್ನು ಒಣಗಿಸಬಹುದು(ಡ್ರೈನೆಸ್).
ಬಿಸಿನೀರು ಕೆಲವು ಸಂದರ್ಭಗಳಲ್ಲಿ ನಿಮ್ಮ ತ್ವಚೆಯನ್ನು ಕೆಂಪಗಾಗಿಸಿ, ಚರ್ಮದ ಸಿಪ್ಪೆ ಹೋಗಲು ಕಾರಣವಾಗಬಹುದು.
ಶಾಖವು ನೈಸರ್ಗಿಕ ತೈಲಗಳನ್ನು ಕರಗಿಸುವ ಶಕ್ತಿ ಹೊಂದಿದೆ. ಹೀಗಾಗಿ ಚರ್ಮದ ಸೂಕ್ಷ್ಮಜೀವಿಗಳ ಕೊರತೆಗೆ ಕಾರಣವಾಗಬಹುದು.
ಬಿಸಿನೀರಿನ ಸ್ನಾನದಿಂದ ಆಗುವ ಅತಿಯಾದ ಶಾಖದಿಂದ ಚಳಿಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆ ಸಮಯದಲ್ಲೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
ಹೀಗಾಗಿ ಉಗುರುಬೆಚ್ಚಗಿನ ನೀರು ತಾಪಮಾನವನ್ನು ಸಮತೋಲನಗೊಳಿಸುವುದಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಈ ರಾಡಿಕ್ಸ್ ಸಂಖ್ಯೆಯ ಜನರಿಗೆ ಎಮೋಷನ್ ಜಾಸ್ತಿ, ಆದಾಯ ಉತ್ತಮವಾಗಿರುತ್ತೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ