ಬೇಸಿಗೆಯಲ್ಲಿ ಚರ್ಮದ ಆರೈಕೆಗೆ 10 ಸಲಹೆಗಳು

Image Credits : Adobe Stock

By Priyanka Gowda
Apr 17, 2025

Hindustan Times
Kannada

ಬೇಸಿಗೆಯಲ್ಲಿ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹೀಗಾಗಿ ಇಲ್ಲಿ ನೀಡಿರುವ ಸರಳ ಸಲಹೆಯೊಂದಿಗೆ ಮುಖವನ್ನು ಆರೋಗ್ಯಕರವಾಗಿ ಹಾಗೂ ಹೊಳೆಯುವಂತೆ ಮಾಡಬಹುದು. ಇಲ್ಲಿವೆ ಚರ್ಮದ ಆರೈಕೆ ಸಲಹೆಗಳು.

Image Credits : Adobe Stock

ಬೆವರುವಿಕೆ ಮತ್ತು ಹೊರಾಂಗಣ ಚಟುವಟಿಕೆಗಳು ಚರ್ಮದ ರಂಧ್ರಗಳನ್ನು ಮುಚ್ಚಬಹುದು. ಕೊಳೆ ಮತ್ತು ಎಣ್ಣೆಯನ್ನು ತೆಗೆದುಹಾಕಲು ಬೆಳಗ್ಗೆ ಮತ್ತು ಮಲಗುವ ಮೊದಲು ಚರ್ಮವನ್ನು ಸ್ವಚ್ಛಗೊಳಿಸಬೇಕು.

Image Credits : Adobe Stock

ಬೇಸಿಗೆಯಲ್ಲಿಯೂ ಚರ್ಮಕ್ಕೆ ತೇವಾಂಶ ಬೇಕು. ಚರ್ಮವನ್ನು ಜಿಡ್ಡುಗಟ್ಟದಂತೆ ತೇವಾಂಶಯುಕ್ತವಾಗಿರಿಸಲು ಎಣ್ಣೆ ಮುಕ್ತ ಮಾಯಿಶ್ಚರೈಸರ್ ಅನ್ನು ಆರಿಸಿ. 

Image Credits : Adobe Stock

ನೀವು ದಿನವನ್ನು ಹೊರಾಂಗಣದಲ್ಲಿ ಕಳೆಯದಿದ್ದರೂ ಸಹ ಪ್ರತಿದಿನ ಬೆಳಗ್ಗೆ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಿ. 

Image Credits : Adobe Stock

ವಾರಕ್ಕೆ ಒಂದು ಅಥವಾ ಎರಡು ಬಾರಿ ಮಸಾಜ್ ಅಥವಾ ಮನೆಮದ್ದು ಬಳಸಿ ಫೇಶಿಯಲ್ ಮಾಡುವುದರಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Image Credits : Adobe Stock

ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಹೈಡ್ರೇಟ್ ಆಗಿರುವುದು ಬಹಳ ಮುಖ್ಯ. ನೀರು ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ.

Image Credits : Adobe Stock

ಕಲ್ಲಂಗಡಿ, ಸೌತೆಕಾಯಿ ಮತ್ತು ಕಿತ್ತಳೆಗಳಂತಹ ಹಣ್ಣುಗಳು ನೀರಿನಿಂದ ತುಂಬಿರುತ್ತವೆ. ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.

Image Credits : Adobe Stock

ಬೆರ್ರಿ, ಸಿಟ್ರಸ್ ಹಣ್ಣುಗಳು ಮತ್ತು ಸೊಪ್ಪು ತರಕಾರಿಗಳಂತಹ ಆಹಾರಗಳು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ ಮತ್ತು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. 

Image Credits : Adobe Stock

ಶೀಟ್ ಮಾಸ್ಕ್ ಚರ್ಮದ ಆರ್ದ್ರತೆಯನ್ನು ಹೆಚ್ಚಿಸುತ್ತದೆ. ಇದು ಮುಖಕ್ಕೆತಾಜಾತನ ಮತ್ತು ಹೊಳಪನ್ನು ನೀಡುತ್ತದೆ. 

Image Credits : Adobe Stock

ಬೇಸಿಗೆಯಲ್ಲಿ ತಣ್ಣೀರು ಸ್ನಾನ ಮಾಡುವುದರಿಂದ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

Image Credits : Adobe Stock

ಉತ್ತಮ ನಿದ್ರೆ ಅತ್ಯಗತ್ಯ. ಚರ್ಮದ ಕಾಂತಿಗೆ ಮತ್ತು ಆರೋಗ್ಯವಾಗಿರಲು ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಿ.

Image Credits : Adobe Stock

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS