ತ್ವಚೆ ಸುಕ್ಕಾಗುವಿಕೆ, ಕಳೆಗುಂದುವುದನ್ನು ತಡೆಯುವ 10 ಆಹಾರಗಳು ಇಲ್ಲಿವೆ

freepik

By Priyanka Gowda
Oct 03, 2024

Hindustan Times
Kannada

ವಯಸ್ಸಾಗುತ್ತಿದ್ದಂತೆ ಚರ್ಮ ಸುಕ್ಕಾಗುವುದು, ಕಳೆಗುಂದುವುದು ಸಾಮಾನ್ಯ. ಸಮತೋಲಿತ ಆಹಾರ ಸೇವನೆಯು ತ್ವಚೆಯ ಆರೈಕೆಗೆ ಬಹಳ ಮುಖ್ಯವಾಗಿದೆ. ಈ ಹಣ್ಣುಗಳು ತ್ವಚೆಯ ಕಾಳಜಿಗೆ ಪೂರಕವಾಗಿದೆ.

freepik

ಬೆರ್ರಿ ಹಣ್ಣುಗಳು: ನೇರಳೆ ಹಣ್ಣುಗಳು, ಸ್ಟ್ರಾಬೆರಿಗಳು ಮತ್ತು ರಸ್ಬೆರ್ರಿ, ವಿಟಮಿನ್ ಸಿ ಮತ್ತು ಇ ನಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿವೆ. ಇವು ಸ್ವತಂತ್ರ ರಾಡಿಕಲ್‍ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

freepik

ಬಟರ್ ಫ್ರೂಟ್(ಬೆಣ್ಣೆಹಣ್ಣು): ಈ ಹಣ್ಣಿನಲ್ಲಿ ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಇ ಮತ್ತು ಸಿ ಯಲ್ಲಿ ಸಮೃದ್ಧವಾಗಿವೆ. ಇದು ತ್ವಚೆ ಸುಕ್ಕಾಗುವಿಕೆ, ಕಪ್ಪುಚುಕ್ಕೆಗಳನ್ನು ತಡೆಗಟ್ಟಲು ಸಹಕಾರಿ.

freepik

ಒಣಹಣ್ಣುಗಳು: ಬಾದಾಮಿ, ವಾಲ್‌ನಟ್ಸ್‌ನಂತಹ ಒಣಹಣ್ಣುಗಳು ಆರೋಗ್ಯಕರ ಕೊಬ್ಬುಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇಗಳಲ್ಲಿ ಅಧಿಕವಾಗಿವೆ. ಇವು ತ್ವಚೆಯನ್ನು ಹೈಡ್ರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

freepik

ಮೀನು: ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲಗಳಾಗಿವೆ. ಇವು ತ್ವಚೆಯ ಕಾಳಜಿಗೆ ಅತ್ಯುತ್ತಮವಾಗಿದೆ.

freepik

ಸೊಪ್ಪು ತರಕಾರಿ: ಪಾಲಕ್, ಎಲೆಕೋಸು ಇತ್ಯಾದಿ ಸೊಪ್ಪಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಸಮೃದ್ಧವಾಗಿದೆ. ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು, ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

freepik

ಸಿಹಿಗೆಣಸು: ಸಿಹಿಗೆಣಸು ಬೀಟಾ-ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಸೂರ್ಯನ ಯುವಿ ಕಿರಣದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

freepik

ಗ್ರೀನ್ ಟೀ: ಕ್ಯಾಟೆಚಿನ್‌ಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಟೀ, ಯುವಿ ಕಿರಣಗಳು ಹಾಗೂ ಸುಕ್ಕುಗಳನ್ನು ತಡೆಗಟ್ಟಲು ಪರಿಣಾಮಕಾರಿಯಾಗಿದೆ.

freepik

ಟೊಮೆಟೊ: ಲೈಕೋಪೀನ್‌ನ ಉತ್ತಮ ಮೂಲವಾಗಿರುವ ಟೊಮೆಟೊ ಉತ್ಕರ್ಷಣ ನಿರೋಧಕವಾಗಿದ್ದು, ಯುವಿ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

freepik

ಡಾರ್ಕ್ ಚಾಕೊಲೇಟ್: ಇದು ಚರ್ಮವನ್ನು ಹೈಡ್ರೇಟ್ ಮಾಡುವಲ್ಲಿ ಸಹಕಾರಿಯಾಗಿದೆ. ಇವು ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಆರೋಗ್ಯಕರ ಹೆಚ್ಚು ತಾರುಣ್ಯದ ನೋಟಕ್ಕೆ ಕೊಡುಗೆ ನೀಡುತ್ತದೆ.

freepik

ದಾಳಿಂಬೆ: ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್‌ಗಳು ಸಮೃದ್ಧವಾಗಿವೆ. ಇದು ಚರ್ಮವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಮತ್ತು ಕಾಲಜನ್ ಉತ್ಪಾದನೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. 

freepik

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು