ಡಾರ್ಕ್ ಸರ್ಕಲ್ ಬಗ್ಗೆ ಚಿಂತೆ ಬಿಡಿ, ಈ ಮನೆಮದ್ದು ಪ್ರಯತ್ನಿಸಿ
freepik
By Priyanka Gowda Oct 19, 2024
Hindustan Times Kannada
ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ (ಕಪ್ಪು ವರ್ತುಲ) ಗಳು ಆಯಾಸ ಅಥವಾ ವಯಸ್ಸಾದ ಕಾರಣದಿಂದ ಉಂಟಾಗಬಹುದು. ಇದನ್ನು ಪರಿಹರಿಸಲು ಇಲ್ಲಿದೆ ಸಿಂಪಲ್ ಮನೆಮದ್ದು.
freepik
ಆಯಾಸ ಮತ್ತು ನಿದ್ದೆಯ ಕೊರತೆಯು ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಮೂಡಲು ಕಾರಣವಾಗಬಹುದು. ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ನಿದ್ದೆ ಅತ್ಯಗತ್ಯ.
freepik
ಸೌತೆಕಾಯಿ: ಸೌತೆಕಾಯಿಯನ್ನು ಕತ್ತರಿಸಿ 10 ನಿಮಿಷಗಳ ಕಾಲ ಕಣ್ಣಿಗೆ ಇಡುವುದರಿಂದ ಕಣ್ಣನ್ನು ತಂಪಾಗಿಸುತ್ತದೆ. ಅಲ್ಲದೆ, ಇದು ಉರಿಯೂತವನ್ನು ಕಡಿಮೆ ಮಾಡುವಲ್ಲೂ ಸಹಕಾರಿ.
freepik
ರೋಸ್ ವಾಟರ್: ಗುಲಾಬಿ ನೀರನ್ನು ಹತ್ತಿಯುಂಡೆಯಲ್ಲಿ ಅದ್ದಿ ಡಾರ್ಕ್ ಸರ್ಕಲ್‌ಗೆ ಹಚ್ಚಿ 15 ನಿಮಿಷಗಳ ಹಾಗೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು. ಪಫಿನೆಸ್, ಡಾರ್ಕ್ ಸರ್ಕಲ್ ಕಡಿಮೆ ಮಾಡುವಲ್ಲಿ ಪರಿಣಾಮಕಾರಿ.
freepik
ಬಾದಾಮಿ ಎಣ್ಣೆ: ವಿಟಮಿನ್ ಇ ನಲ್ಲಿ ಸಮೃದ್ಧವಾಗಿರುವುದರಿಂದ ಇದನ್ನು ಮಲಗುವ ಮುನ್ನ ಡಾರ್ಕ್ ಸರ್ಕಲ್‌ಗೆ ಹಚ್ಚಿ ಮಸಾಜ್ ಮಾಡಬೇಕು. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
freepik
ಅಲೋವೆರಾ ಜೆಲ್: ಇದರಲ್ಲಿರುವ ಹೈಡ್ರೇಟಿಂಗ್ ಗುಣಲಕ್ಷಣಗಳು ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ಚರ್ಮವನ್ನು ಉತ್ತೇಜಿಸುವಲ್ಲಿ ಇದು ಸಹಕಾರಿ.
freepik
ತೆಂಗಿನೆಣ್ಣೆ: ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ತೆಂಗಿನೆಣ್ಣೆಯನ್ನು ಡಾರ್ಕ್ ಸರ್ಕಲ್‌ಗೆ ಹಚ್ಚಿ, ರಾತ್ರಿಯಿಡೀ ಬಿಡಬೇಕು. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
freepik
ಲಕ್ಷ್ಮೀ ಬಾರಮ್ಮ ನಟಿ ನೇಹಾ ಗೌಡ ಮಡಿಲಿಗೆ ಪುಟಾಣಿ ಗೊಂಬೆಯ ಆಗಮನ