ಪ್ರತಿದಿನ ಲಿಪ್‌ಸ್ಟಿಕ್‌ ಹಚ್ಚುವುದರಿಂದಾಗುವ ಅಪಾಯಗಳಿವು 

By Reshma
Apr 04, 2024

Hindustan Times
Kannada

ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುವುದರಿಂದ ಅಂದ ಹೆಚ್ಚುವುದು ನಿಜ. ಆದರೆ ಇದರಲ್ಲಿ ಬಿಸ್ಮತ್‌ ಆಕ್ಸಿಕ್ಲೋರೈಡ್‌ ಎಂಬ ಅಂಶವಿದ್ದು, ಇದರ ಕಾರ್ಸಿನೋಜೆನಿಕ್‌ ಗುಣಲಕ್ಷಣಗಳು ಚರ್ಮಕ್ಕೆ ಹಾನಿ ಉಂಟು ಮಾಡುತ್ತವೆ. 

ಕೆಲವು ಪ್ರಸಿದ್ಧ ಬ್ರ್ಯಾಂಡ್‌ನ ಲಿಪ್‌ಸ್ಟಿಕ್‌ಗಳು ಸೂಕ್ತ ಸುರಕ್ಷಿತ ಮಾರ್ಗವನ್ನು ಅನುಸರಿಸುತ್ತವೆ. ಆದರೆ ಕೆಲವು ಲಿಪ್‌ಸ್ಟಿಕ್‌ಗಳು ಚರ್ಮಕ್ಕೆ ಹಾನಿ ಮಾಡುವುದು ಸುಳ್ಳಲ್ಲ. ಇದರಿಂದ ಅಲರ್ಜಿ ಉಂಟಾಗಬಹುದು. 

ಲಿಪ್‌ಸ್ಟಿಕ್‌ ಮೇಲ್ನೋಟಕ್ಕೆ ತುಟಿಯ ಬಣ್ಣ ಹೆಚ್ಚಿಸಿದರೂ ಕೂಡ ಇದು ನೈಸರ್ಗಿಕ ವರ್ಣದ್ರವ್ಯ ಕಡಿಮೆಯಾಗುವಂತೆ ಮಾಡುವುದು ಸುಳ್ಳಲ್ಲ. 

ಕೆಲವು ಪರೀಕ್ಷೆಗಳಲ್ಲಿ ಲಿಪ್‌ಸ್ಟಿಕ್‌ನಲ್ಲಿ ಭಾರದ ಲೋಹಗಳು ಕಂಡುಬಂದಿದ್ದು, ಇವು ಅಂಗಾಂಗಳಿಗೆ ಹಾನಿ ಮಾಡುವ ಹಾಗೂ ಇದರಿಂದ ಅಪಾಯಕಾರಿ ಸೋಂಕು ಹರಡುವ ಸಾಧ್ಯತೆ ಇದೆ ಎಂಬುದು ಸಾಬೀತಾಗಿದೆ. 

ಪ್ರತಿನಿತ್ಯ ಲಿಪ್‌ಸ್ಟಿಕ್‌ ಬಳಸುವುದರಿಂದ ತುಟಿಗಳು ಒಣಗುವುದು ಮಾತ್ರವಲ್ಲ, ಕೆಲವೊಮ್ಮೆ ನೈಸರ್ಗಿಕ ತೇವಾಂಶವನ್ನೂ ಹೊರಹಾಕುತ್ತದೆ. ಲಿಪ್‌ಸ್ಟಿಕ್‌ ಬದಲು ಲಿಪ್‌ ಬಾಮ್‌ ಬಳಕೆ ಉತ್ತಮ. 

ಲಿಪ್‌ಸ್ಟಿಕ್‌ಗಳಲ್ಲಿ ಪ್ರಿಸರ್ವೇಟಿವ್‌ಗಳು ಇರುವ ಕಾರಣ ಇವು ಉಬ್ಬಸ, ಉಸಿರಾಟದ ಸಮಸ್ಯೆಗಳು ಹಾಗೂ ಕಣ್ಣಿನ ಕಿರಿಕಿರಿಯನ್ನು ಉಂಟು ಮಾಡಬಹುದು. ಕೆಲವು ಲಿಪ್‌ಸ್ಟಿಕ್‌ಗಳು ಕ್ಯಾನ್ಸರ್‌ಗೂ ಕಾರಣವಾಗಬಹುದು. 

ಲಿಪ್‌ಸ್ಟಿಕ್‌ನಿಂದಾದ ಪಿಗ್ಮಂಟೇಷನ್‌ ನಿವಾರಿಸಲು ತುಟಿಗಳಿಗೆ ಜೇನುತುಪ್ಪ ಹಾಗೂ ಸಕ್ಕರೆಯ ಸ್ಕ್ರಬ್‌ ಬಳಸಬಹುದು. ಇವು ತುಟಿ ಚರ್ಮದ ತೇವಾಂಶ ಹೆಚ್ಚಿಸುವುದು ಮಾತ್ರವಲ್ಲ, ನೈಸರ್ಗಿಕವಾಗಿ ತುಟಿಯ ಬಣ್ಣ ಬದಲಾಗುವಂತೆ ಮಾಡುತ್ತವೆ. 

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ