ಎರಡೇ ನಿಮಿಷದಲ್ಲಿ ಮುಖದ ಕಾಂತಿ ಹೆಚ್ಚಲು ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ 

By Reshma
Apr 13, 2024

Hindustan Times
Kannada

ಬೇಸಿಗೆ ಕಾಲದಲ್ಲಿ ಬೇಡವೆಂದರೂ ಮುಖದ ಕಾಂತಿ ಕಳೆಗುಂದುತ್ತದೆ. ಚರ್ಮವು ತಾಜಾತನ ಕಳೆದುಕೊಂಡು ಡಲ್‌ ಆಗುತ್ತದೆ.

ಸೂರ್ಯನ ಬಿಸಿಲಿನ ಜೊತೆಗೆ ಧೂಳು, ಬೆವರು, ಕೊಳೆ ಮುಂತಾದವುಗಳಿಂದ ಚರ್ಮದ ಬಣ್ಣ ಮಾಸಿದಂತಾಗುವುದು ಸಹಜ.  

ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ತ್ವಚೆಯ ಹೊಳಪು ಹೆಚ್ಚಿ, ಕಾಂತಿ ಮರಳುವಂತಾಗಲು ಈ ಸರಳ ಸಲಹೆಗಳನ್ನು ಪಾಲಿಸಿ.

ಮುಖಕ್ಕೆ ರೋಸ್‌ವಾಟರ್‌ ಸ್ಪ್ರೇ ಮಾಡಿ. ನಂತರ ಟಿಶ್ಯೂವಿನಿಂದ ಮುಖವನ್ನು ಚೆನ್ನಾಗಿ ಒರೆಸಿ. ಇದರಿಂದ ತಕ್ಷಣಕ್ಕೆ ಮುಖ ಕಾಂತಿ ಹೆಚ್ಚುತ್ತದೆ. 

ಮುಖದ ಚರ್ಮದ ಮೇಲೆ ಐಸ್‌ ಕ್ಯೂಬ್‌ನಿಂದ ಉಜ್ಜುವುದರಿಂದ ತ್ವಚೆಯ ರಂಧ್ರಗಳು ತೆರೆದುಕೊಳ್ಳುತ್ತವೆ. ಮುಖದ ಮೇಲೆ ಸಂಗ್ರಹವಾದ ಕೊಳೆ, ಧೂಳು ಸ್ವಚ್ಛವಾಗಿ ಚರ್ಮದ ಹೊಳಪು ಹೆಚ್ಚುತ್ತದೆ. 

ಗ್ರೀನ್‌ ಟೀ ಬ್ಯಾಗ್‌ ಬಳಸಿದ ನಂತರ ಅದನ್ನು ಫ್ರಿಜ್‌ನಲ್ಲಿಡಿ. ನಂತರ ತಣ್ಣನೆಯ ಟೀ ಬ್ಯಾಗ್‌ನಿಂದ ಮುಖಕ್ಕೆ ಮಸಾಜ್‌ ಮಾಡಿ. ಇದರಿಂದಲೂ ತ್ವಚೆ ಇನ್‌ಸ್ಟಂಟ್‌ ಆಗಿ ಗ್ಲೋ ಆಗುತ್ತದೆ. 

ಫ್ರಿಜ್‌ನಲ್ಲಿಟ್ಟಿರುವ ಹಾಲಿನಿಂದ ಮುಖಕ್ಕೆ ಚೆನ್ನಾಗಿ ಮಸಾಜ್‌ ಮಾಡಿ. ಇದು ಮುಖದ ಮೇಲಿನ ಧೂಳಿನ ಕಣಗಳನ್ನು ಸ್ವಚ್ಛ ಮಾಡುತ್ತದೆ. ಮುಖದ ಕಾಂತಿ ಮರಳಿಸುತ್ತದೆ. 

ಈ ಎಲ್ಲದರ ಜೊತೆಗೆ ಮುಖದ ಕಾಂತಿ ಹೆಚ್ಚಲು ಚೆನ್ನಾಗಿ ನಿದ್ದೆ ಮಾಡುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ಕೂಡ ಮುಖ್ಯವಾಗುತ್ತದೆ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS