ಮುಖದ ಅಂದ ಹೆಚ್ಚಿಸಲು ಗ್ರೀನ್ ಟೀಯನ್ನು ಹೀಗೆಲ್ಲಾ ಬಳಸಬಹುದು ನೋಡಿ
By Reshma Aug 20, 2024
Hindustan Times Kannada
ಗ್ರೀನ್ ಟೀ ಸಾಕಷ್ಟು ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ದೇಹ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದು ಅನೇಕ ರೋಗಗಳನ್ನು ಗುಣಪಡಿಸುತ್ತದೆ
ಗ್ರೀನ್ ಟೀ ತೂಕ ಇಳಿಸೋದು ಮಾತ್ರವಲ್ಲ ಅಂದವನ್ನೂ ಹೆಚ್ಚಿಸುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಗೆ ಹಲವು ಪ್ರಯೋಜನಗಳಿವೆ
ಗ್ರೀನ್ ಟೀ ಕೂಲಿಂಗ್ ಪರಿಣಾಮವನ್ನು ಹೊಂದಿದೆ. ಇದು ಚರ್ಮಕ್ಕೆ ತಂಪು ನೀಡುತ್ತದೆ. ಮುಖದ ಮೇಲೆ ಕಿರಿಕಿರಿ ಇದ್ದರೆ ಗ್ರೀನ್ ಟೀ ಪ್ರಯೋಜನಕಾರಿ
ಕಣ್ಣಿಗೆ ಕೆಳಗೆ ಡಾರ್ಕ್ ಸರ್ಕಲ್ ಸಮಸ್ಯೆ ಇದ್ದರೆ ಕಪ್ಪಾಗಿರುವ ಜಾಗದಲ್ಲಿ ಗ್ರೀನ್ ಟೀ ಬ್ಯಾಗ್ ಇರಿಸಿ. ಇದು ಕಪ್ಪು ವರ್ತುಲಗಳನ್ನು ಕಡಿಮೆ ಮಾಡಿ
ಮುಖದಲ್ಲಿ ಮೊಡವೆ ಮತ್ತು ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಇದ್ದರೆ ಗ್ರೀನ್ ಟೀ ಪರಿಹಾರ ನೀಡುತ್ತದೆ, ಈ ಎರಡೂ ಸಮಸ್ಯೆ ನಿವಾರಿಸಿ ತ್ವಚೆಯ ಅಂದ ಹೆಚ್ಚಲು ಗ್ರೀನ್ ಟೀ ಸಹಕಾರಿ
ಗ್ರೀನ್ ಟೀ ಹಚ್ಚುವುದರಿಂದ ತ್ವಚೆ ಒಣಗುವುದಿಲ್ಲ. ಇದು ತ್ವಚೆಯ ತೇವಾಂಶ ಹೆಚ್ಚುವಂತೆ ಮಾಡುತ್ತದೆ. ಒಣ ಚರ್ಮ ಹೊಂದಿರುವವರು ಗ್ರೀನ್ ಟೀ ಬಳಸಬಹುದು
ಚರ್ಮ ಟ್ಯಾನ್ ಆಗಿದ್ದರೆ ಗ್ರೀನ್ ಟೀ ಫೇಸ್‌ಪ್ಯಾಕ್ ಬಳಸಿ. ಇದರಿಂದ ತ್ವಚೆಯ ಕಳೆ ಹೆಚ್ಚುವುದು ಖಂಡಿತ
ಗ್ರೀನ್ ಟೀ ಹಚ್ಚುವುದರಿಂದ ಮೊಡವೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಚರ್ಮದ ಕೊಳೆ ಸಂಗ್ರಹವಾಗುವುದರಿಂದ ಮೊಡವೆ ಉಂಟಾಗುತ್ತದೆ. ಗ್ರೀನ್ ಟೀ ತ್ವಚೆಯನ್ನು ಆಳದಿಂದಲೇ ಸ್ವಚ್ಛ ಮಾಡುತ್ತದೆ
ಇದು ಆಂಟಿ ಏಜಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ತ್ವಚೆಯ ಮೇಲಿನ ಸುಕ್ಕು ನಿವಾರಿಸಿ ಚರ್ಮವನ್ನು ಬಿಗಿಗೊಳಿಸುತ್ತದೆ
ಗ್ರೀನ್ ಟೀ ಕುದಿಸಿ, ತಣ್ಣಗಾಗಿಸಿ ಇದನ್ನು ದಿನದಲ್ಲಿ ಎರಡು ಬಾರಿ ಟೋನರ್ ರೀತಿ ಕೂಡ ಬಳಸಬಹುದು