ಮೇಕಪ್ ಇಲ್ಲದೇ ಚಂದ್ರನಂತೆ ಹೊಳೆವ ನಟಿ ಸಾಯಿ ಪಲ್ಲವಿ ಸೌಂದರ್ಯ ರಹಸ್ಯ ಹೀಗಿದೆ
By Reshma Oct 31, 2024
Hindustan Times Kannada
ಸಹಜ ಸುಂದರಿ ಎಂದೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ ಹಲವರಿಗೆ ಫೇವರಿಟ್
ಸಹಜ ಅಭಿನಯದಿಂದಲೂ ಆಕೆ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಮೇಕಪ್ ಇಲ್ಲದೇ ಚಂದ್ರನಂತೆ ಹೊಳೆವ ಇವರ ಬ್ಯೂಟಿ ಸಿಕ್ರೇಟ್ ಏನಿರಬಹುದು ಎಂಬ ಕುತೂಹಲ ಹಲವರಿಗಿದೆ
ಸಾಯಿಪಲ್ಲವಿಯ ಹೊಳಪಿನ ತ್ವಚೆಯ ಹಿಂದಿನ ರಹಸ್ಯ ಹೈಡ್ರೇಟ್ ಆಗಿರುವುದು. ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಾಂಶ ಹೊರ ಹಾಕಲು ಸಹಾಯ ಮಾಡುತ್ತದೆ
ಸಾಯಿ ಪಲ್ಲವಿ ಸಾಮಾನ್ಯವಾಗಿ ಕಡಿಮೆ ಮೇಕಪ್ ಮಾಡುತ್ತಾರೆ. ಇದರಿಂದ ಚರ್ಮವು ಉಸಿರಾಡಲು ಹಾಗೂ ನೈಸರ್ಗಿಕ ಸಮತೋಲವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ
ಸಾಯಿ ಪಲ್ಲವಿ ಎಂದಿಗೂ ಸನ್‌ಸ್ಕ್ರೀನ್ ಬಳಸುವುದನ್ನು ನಿಲ್ಲಿಸುವುದಿಲ್ಲ. ಪ್ರತಿದಿನ ತಪ್ಪದೇ ಸನ್‌ಸ್ಕ್ರೀನ್ ಹಚ್ಚಬೇಕು ಎಂದು ಅವರು ಸಲಹೆ ನೀಡುತ್ತಾರೆ
ಹೊಳಪಿನ ತ್ವಚೆಗೆ ಮಾಯಿಶ್ಚರೈಸ್ ಮಾಡುವುದು ಬಹಳ ಅಗತ್ಯ. ಇದು ಚರ್ಮವನ್ನು ಮೃದುವಾಗಿಸಿ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ
ಹಿಂದೊಮ್ಮೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಆಕೆ ಒಟ್ಟಾರೆ ತನ್ನ ಆರೋಗ್ಯ ಹಾಗೂ ಸೌಂದರ್ಯದ ಹಿಂದಿನ ಗುಟ್ಟು ವಾರದಲ್ಲಿ 3 ದಿನ ವ್ಯಾಯಾಮ ಮಾಡುವುದು ಎಂದಿದ್ದರು
ಆರೋಗ್ಯಕರ ತ್ಚಚೆಯನ್ನು ಕಾಪಾಡಿಕೊಳ್ಳಲು ಹಣ್ಣು, ತರಕಾರಿ ಹಾಗೂ ಒಣಹಣ್ಣುಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವನೆಯೂ ಅಗತ್ಯ. ಆಕೆ ಸೇವಿಸುವ ಆಹಾರದಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಅಧಿಕವಾಗಿರುತ್ತದೆ
ಚರ್ಮ ಸದಾ ಹೊಳೆಯುತ್ತಿರಬೇಕು ಎಂದರೆ ಸಾಕಷ್ಟು ನಿದ್ದೆ ಮಾಡುವುದು ಅವಶ್ಯ ಎಂದು ಸಾಯಿ ಪಲ್ಲವಿ ಹೇಳುತ್ತಾರೆ
ರಾಸಾಯನಿಕ ಸಮೃದ್ಧ ಉತ್ಪನ್ನಗಳನ್ನ ಬಳಸುವುದರಿಂದ ಚರ್ಮದಲ್ಲಿನ ನೈಸರ್ಗಿಕ ತೈಲದ ಅಂಶ ಮರೆಯಾಗಿ ಚರ್ಮ ಶುಷ್ಕವಾಗುತ್ತದೆ. ಆ ಕಾರಣಕ್ಕೆ ಸಾಯಿಪಲ್ಲವಿ ಸೌಮ್ಯವಾದ ತ್ವಚೆಯ ಉತ್ಪನ್ನಗಳನ್ನು ಬಳಸುತ್ತಾರೆ
ಐಪಿಎಲ್ 18ನೇ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.