ಕೂದಲ ಆರೈಕೆಗೆ ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ನೋಡಿ
By Reshma
Feb 07, 2025
Hindustan Times
Kannada
ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಶಿಯಂ, ವಿಟಮಿನ್, ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಇವು ಕೂದಲನ್ನು ಪೋಷಿಸುತ್ತವೆ
ಬಾಳೆಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಕೂದಲು ಮೃದುವಾಗುತ್ತದೆ
ಬಾಳೆಸಿಪ್ಪೆಯಿಂದ ತಯಾರಿಸಿದ ರಸವನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ
ಬಾಳೆಸಿಪ್ಪೆ ಬಳಸುವುದರಿಂದ ಕೂದಲಿಗೆ ಹೊಳಪು ಸಿಗುತ್ತದೆ. ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ
ಬಾಳೆಸಿಪ್ಪೆಯ ರಸ ಹಾಗೂ ತೆಂಗಿನೆಣ್ಣೆ ಮಿಶ್ರಣ ಮಾಡಿ ಹಚ್ಚುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ
ಕೂದಲಿಗೆ ಬಾಳೆಹಣ್ಣಿನ ಸಿಪ್ಪೆಗಳನ್ನು ಬಳಸುವಾಗ ತಾಜಾ ಸಿಪ್ಪೆಗಳನ್ನು ಮಾತ್ರ ಬಳಸಿ
ನಿಯಮಿತವಾಗಿ ಇದನ್ನು ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ದಪ್ಪವಾಗಿ, ಆರೋಗ್ಯವಾಗಿ ಕಾಣಿಸುತ್ತದೆ
ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಕೂದಲಿನ ಆರೈಕೆಗೆ ಯಾವುದೇ ವಸ್ತುವನ್ನು ಬಳಸುವ ಮೊದಲು ತಜ್ಞರ ಸಲಹೆ ಪಡೆಯಲು ಮರೆಯದಿರಿ
ಈ ಬೇಸಿಗೆಯಲ್ಲಿ ಹೀಟ್ ಸ್ಟ್ರೋಕ್ ತಡೆಗಟ್ಟಲು 10 ಸಲಹೆಗಳು
Image Credits : Adobe Stock
ಮುಂದಿನ ಸ್ಟೋರಿ ಕ್ಲಿಕ್ ಮಾಡಿ