ಜೀರಿಗೆ, ಧನಿಯಾ, ಸೋಂಪಿನ ಪಾನೀಯದಲ್ಲಿ ಅಡಗಿದೆ ಸೌಂದರ್ಯದ ಗುಟ್ಟು 

By Reshma
Jun 11, 2024

Hindustan Times
Kannada

ಜೀರಿಗೆ, ಧನಿಯಾ ಹಾಗೂ ಸೋಂಪು ಹಾಕಿ ತಯಾರಿಸಿದ ಪಾನೀಯ ಕುಡಿಯುವುದರಿಂದ ದೇಹದಲ್ಲಿನ ವಿಷಾಂಶ ಹೊರ ಹೋಗುತ್ತದೆ. ಇದರಿಂದ ನೈಸರ್ಗಿಕವಾಗಿ ಚರ್ಮದ ಹೊಳಪು ಹೆಚ್ಚುತ್ತದೆ. ಇದನ್ನು ಕುಡಿಯುವುದರಿಂದ ಅಂದ ಹೆಚ್ಚುವುದು ಹೇಗೆ ನೋಡಿ. 

ಈ 3 ಕಾಳುಗಳು ಖನಿಜ ಹಾಗೂ ವಿಟಮಿನ್‌ಗಳ ಪವರ್‌ ಹೌಸ್‌ ಆಗಿದ್ದು, ಇವು ನಂಜು ನಿರೋಧಕವಾಗಿವೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಇವು ಹೇಳಿ ಮಾಡಿಸಿದ್ದು. 

ಎಣ್ಣೆ ಚರ್ಮದವರಿಗೆ ಮೊಡವೆ ಸೇರಿದಂತೆ ಇತರ ಚರ್ಮದ ಸಮಸ್ಯೆಗಳಾಗುವುದು ಸಹಜ. ಈ ಪಾನೀಯವನ್ನು ಕುಡಿಯುವುದರಿಂದ ಬೆವರು ಹಾಗೂ ಎಣ್ಣೆ ಚರ್ಮದಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಜೀರಿಗೆ, ಧನಿಯಾ, ಸೋಂಪಿನ ಪಾನೀಯ ಕುಡಿಯುವುದರಿಂದ ಮೊಡವೆಗಳ ಬೆಳವಣಿಗೆ ಮತ್ತು ಮುಖದಲ್ಲಿನ ಕಲೆಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಪಾನೀಯವು ಕ್ಯಾಲ್ಸಿಯಂ, ಸತು ಹಾಗೂ ಸೆಲೆನಿಯಂನಲ್ಲಿ ಸಮೃದ್ಧವಾಗಿರುವುದರಿಂದ ಅವು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಮತ್ತು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಕಾಪಾಡಿಕೊಳ್ಳಲು ಹೆಸರುವಾಸಿಯಾಗಿದೆ. ಇದು ಚರ್ಮದ ಹೊಳಪಿಗೂ ಕಾರಣವಾಗುತ್ತದೆ. 

ಅರ್ಧ ಚಮಚದಷ್ಟು ಜೀರಿಗೆ, ಕೊತ್ತಂಬರಿ ಹಾಗೂ ಸೋಂಪನ್ನು ರಾತಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಮರುದಿನ ಈ ಮಿಶ್ರಣವನ್ನು ಸ್ವಲ್ಪ ನೀರು ಸೇರಿಸಿ ಕುದಿಸಿ, ನಂತರ ಸೋಸಿ ಸ್ವಲ್ಪ ಜೇನುತುಪ್ಪ, ಅರ್ಧ ನಿಂಬೆ ಹಾಗೂ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ. 

ಒತ್ತಡದ ಜೀವನಶೈಲಿಯಲ್ಲಿ ತ್ವಚೆಯ ಆರೈಕೆಯ ಕಡೆ ಗಮನ ಕೊಡುವುದು ಕಷ್ಟವಾದರೆ ನೀವು ಈ ಪಾನೀಯವನ್ನು ಕುಡಿಯಲು ಅಭ್ಯಾಸ ಮಾಡಬೇಕು. ಇದು ದೇಹವನ್ನು ಡಿಟಾಕ್ಸ್‌ ಮಾಡುವ ಜೊತೆಗೆ ಹೊಟ್ಟೆಯ ಆರೋಗ್ಯಕ್ಕೂ ಉತ್ತಮ. 

ಈ ಡಿಟಾಕ್ಸ್‌ ಪಾನೀಯವನ್ನು ಪ್ರತಿದಿನ ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉತ್ತಮ ಜೀರ್ಣಕ್ರಿಯೆ ಹಾಗೂ ಮಲ ವಿಸರ್ಜನೆ ಕೂಡ ಸರಾಗವಾಗಿ ಆಗುತ್ತದೆ. 

ಜೀರಿಗೆಯು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಕಿಣ್ವಗಳನ್ನು ಸ್ರವಿಸುತ್ತದೆ. ಕೊತ್ತಂಬರಿಯು ಅದರ ಖನಿಜ ಮತ್ತು ವಿಟಮಿನ್‌ಗಳಿಗೆ ಹೆಸರುವಾಸಿಯಾಗಿದೆ. ಸೋಂಪು ಚರ್ಮವನ್ನು ತಂಪಾಗಿಸುವ ಗುಣ ಹೊಂದಿದೆ.

ಹಾವು ಸಾಕಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಊರು ಇದು