ನಿಂಬೆಹಣ್ಣನ್ನು ನೇರವಾಗಿ ಮುಖಕ್ಕೆ ಉಜ್ಜುವುದು ಸುರಕ್ಷಿತವೇ, ಇಲ್ಲಿದೆ ಉತ್ತರ 

By Reshma
Mar 30, 2024

Hindustan Times
Kannada

ತ್ವಚೆಯ ಅಂದ ಮಾತ್ರವಲ್ಲ, ಆರೋಗ್ಯ ಹೆಚ್ಚಿಸುವ ಸಲುವಾಗಿಯೂ ನಿಂಬೆಹಣ್ಣನ್ನು ಬಳಸಲಾಗುತ್ತದೆ. 

ಕೆಲವರು ನೇರವಾಗಿ ಮುಖಕ್ಕೆ ನಿಂಬೆಹಣ್ಣಿನಿಂದ ಉಜ್ಜುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ.  

ಹಾಗಾದರೆ ನೇರವಾಗಿ ಮುಖಕ್ಕೆ ನಿಂಬೆಹಣ್ಣಿನಿಂದ ಉಜ್ಜುವುದರಿಂದ ಪ್ರಯೋಜನವಿದೆಯೇ ಅಥವಾ ಇದು ಆರೋಗ್ಯಕ್ಕೆ ಹಾನಿಕಾರಕವೇ?  ಈ ಪ್ರಶ್ನೆಗೆ ಇಲ್ಲಿದೆ ಉತ್ತರ 

ನಿಂಬೆರಸವನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಅಂದ ಹೆಚ್ಚುವುದು ಸುಳ್ಳಲ್ಲ. 

ಆದರೆ ನಿಂಬೆಹಣ್ಣನ್ನು ಕತ್ತರಿಸಿ ನೇರವಾಗಿ ಮುಖಕ್ಕೆ ಉಜ್ಜುವುದು ಸರಿಯಲ್ಲ. 

ನಿಂಬೆಹಣ್ಣಿನಲ್ಲಿ ಪಿಎಚ್‌ ಹಂತ ಅಧಿಕವಾಗಿರುತ್ತದೆ. ಅದು ಆಮ್ಲೀಯವಾಗಿದ್ದು, ಚರ್ಮಕ್ಕೆ ಗಂಭೀರ ಹಾನಿ ಉಂಟು ಮಾಡಬಹುದು.

ನಿಂಬೆಹಣ್ಣನ್ನು ನೇರವಾಗಿ ಚರ್ಮಕ್ಕೆ ಉಜ್ಜುವುದರಿಂದ ಚರ್ಮದ ಕಿರಿಕಿರಿ ಉಂಟಾಗುತ್ತದೆ. ಮುಖದಲ್ಲಿ ದದ್ದು ಉಂಟಾಗಬಹುದು. 

ನಿಂಬೆರಸವನ್ನು ಬೇರೆ ವಸ್ತುಗಳೊಂದಿಗೆ ಬೆರೆಸಿ ನಂತರ ಮುಖಕ್ಕೆ ಹಚ್ಚಿ.  

ಮುಲ್ತಾನಿಮಿಟ್ಟಿ, ಅರಿಸಿನ, ಕಡಲೆಹಿಟ್ಟು ಹೀಗೆ ಯಾವುದಾದರೂ ಪದಾರ್ಥದೊಂದಿಗೆ ನಿಂಬೆರಸ ಬೆರೆಸಿ ಅದನ್ನು ಮುಖಕ್ಕೆ ಹಚ್ಚುವುದು ಉತ್ತಮ. 

ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ