ನತಾಶ ಸೌಂದರ್ಯದ ಗುಟ್ಟು: ಇಲ್ಲಿದೆ ಹಾರ್ದಿಕ್ ಪಾಂಡ್ಯ ಪತ್ನಿಯ ಬ್ಯೂಟಿ ಸೀಕ್ರೆಟ್‌

By Reshma
Jul 15, 2024

Hindustan Times
Kannada

ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಪತ್ನಿ, ವಿದೇಶಿ ಮಾಡೆಲ್‌ ನತಾಶ ಸ್ಟಾಂಕೋವಿಕ್‌ ತನ್ನ ಮನಮೋಹಕ ನೋಟದಿಂದ ಗಮನ ಸೆಳೆಯುತ್ತಾರೆ. 

ನತಾಶ ವೃತ್ತಿಯಲ್ಲಿ ಮಾಡೆಲ್‌ ಮತ್ತು ನಟಿ. ಅವರು ತಮ್ಮ ಫಿಟ್‌ನೆಸ್‌ ಹಾಗೂ ಬ್ಯೂಟಿಗೆ ಹೆಚ್ಚಿನ ಗಮನ ನೀಡುತ್ತಾರೆ. 

ಇವರು ಆಗಾಗ ಮುಖಕ್ಕೆ ಐಸ್‌ಕ್ಯೂಬ್‌ನಿಂದ ಮಸಾಜ್‌ ಮಾಡುತ್ತಾರೆ. ಬಹುಶಃ ಇದು ಅವರ ಬ್ಯೂಟಿ ಸೀಕ್ರೆಟ್‌ ಆಗಿರಬಹುದು. 

ನತಾಶಾ ಆಗಾಗ ಐಸ್‌ಕ್ಯೂಬ್‌ ಫೇಸ್‌ಪ್ಯಾಕ್‌ ಮಾಡುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಐಸ್‌ಕ್ಯೂಬ್‌ ಅನ್ನು ಮುಖಕ್ಕೆ ಹಚ್ಚುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. 

ಅಷ್ಟೇ ಅಲ್ಲದೇ ಐಸ್‌ ಕ್ಯೂಬ್‌ ಅನ್ನು ಬಳಸುವುದರಿಂದ ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಕಡಿಮೆ ಮಾಡಬಹುದು. 

ನತಾಶಾ ಅವರ ಈ ಕ್ರಮವನ್ನು ನೀವೂ ಅನುಸರಿಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. 

ಇಷ್ಟೇ ಅಲ್ಲದೇ ನತಾಶಾ ಪ್ರತಿದಿನ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಾರೆ. 

ಈ ಎಲ್ಲದರ ನಡುವೆ ಪ್ರೀತಿಸಿ ಮದುವೆಯಾದ ನತಾಶಾ ಹಾಗೂ ಹಾರ್ದಿಕ್‌ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.

ಟಿ-20 ವಿಶ್ವಕಪ್‌ಗೂ ಮುನ್ನ ಇಬ್ಬರೂ ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿತ್ತು. 

ಶುಂಠಿ ಸಿಪ್ಪೆ ಬಿಡಿಸಲು ಇಲ್ಲಿದೆ ನೋಡಿ ಸರಳ ವಿಧಾನ; ಸ್ಪೂನ್ ಇದ್ದರೆ ಸಾಕು