ಆರೋಗ್ಯಕ್ಕಷ್ಟೇ ಅಲ್ಲ, ಅಂದಕ್ಕೂ ಬೇಕು ಡಿಟಾಕ್ಸ್‌ ವಾಟರ್‌, ಹೊಳಪಿನ ತ್ವಚೆಯ ಸೀಕ್ರೆಟ್‌ ಇದು

By Reshma
Jul 25, 2024

Hindustan Times
Kannada

ಹಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಡಿಟಾಕ್ಸ್‌ ವಾಟರ್‌ ಕುಡಿಯುವ ಅಭ್ಯಾಸವಿದೆ. ಇದು ದೇಹಾರೋಗ್ಯಕ್ಕೆ ಮಾತ್ರವಲ್ಲ, ತ್ವಚೆಯ ಆರೋಗ್ಯಕ್ಕೂ ಉತ್ತಮ.

ಡಿಟಾಕ್ಸ್‌ ಪಾನೀಯಗಳು ದೇಹದಲ್ಲಿನ ವಿಷಾಂಶವನ್ನು ಹೊರಹಾಕುತ್ತವೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ ಮತ್ತು ಚರ್ಮದ ಹೊಳಪನ್ನು ಒಳಗಿನಿಂದಲೇ ಹೆಚ್ಚಿಸುತ್ತದೆ. 

ಡಿಟಾಕ್ಸ್‌ ವಾಟರ್‌ ತಯಾರಿಸುವುದು ಹೇಗೆ ಅನ್ನುವವರಿಗೆ ಇಲ್ಲಿದೆ ಎರಡು ಸುಲಭ ವಿಧಾನ. 

ಮೊದಲು ಬಾಟಲಿ ಅಥವಾ ಗ್ಲಾಸ್‌ನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಸೌತೆಕಾಯಿ ತುಂಡುಗಳನ್ನು ಸೇರಿಸಿ. 

ಇದಕ್ಕೆ ನಿಂಬೆಹಣ್ಣು, ಪುದಿನಾ ಸೊಪ್ಪು, ಶುಂಠಿ ಚೂರು, ಚಿಯಾ ಸೀಡ್ಸ್‌ ಬೆರೆಸಿ. ರಾತ್ರಿಯಿಡಿ ಇದನ್ನು ಹಾಗೇ ಇಡಿ. ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. 

ಇನ್ನೊಂದು ಎಬಿಸಿ ಪಾನೀಯ. ಇದಕ್ಕೆ ಬಳಸುವ ಮೂರು ವಸ್ತುಗಳ ಹೆಸರಿನಿಂದ ಇದನ್ನು ಎಬಿಸಿ ಪಾನೀಯ ಎಂದು ಕರೆಯಲಾಗುತ್ತದೆ. 

ಒಂದು ಜಗ್‌ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಸೌತೆಕಾಯಿ, ಸೇಬು ಹಾಗೂ ಬೀಟ್‌ರೂಟ್‌ ಸೇರಿಸಿ. ಅದನ್ನು ರಾತ್ರಿಯಿಡೀ ಹಾಗೆ ಬಿಟ್ಟು ಬೆಳಿಗ್ಗೆ ಎದ್ದು ಕುಡಿಯಿರಿ. 

ಇದು ಸಾಮಾನ್ಯಜ್ಞಾನವನ್ನು ಆಧರಿಸಿದ ಮಾಹಿತಿಯಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ. 

ಎಸ್‌ ಜಾನಕಿ ಎಷ್ಟು ಭಾಷೆಗಳಲ್ಲಿ ಹಾಡಿದ್ದಾರೆ ಗೊತ್ತೆ