ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ವಿಟಮಿನ್‌ ಇ ಕ್ಯಾಪ್ಸೂಲ್‌ ಬಳಸುವ ಮುನ್ನ ಈ ಅಂಶ ಮರಿಬೇಡಿ 

By Reshma
Apr 08, 2024

Hindustan Times
Kannada

ತ್ವಚೆಯ ಅಂದ ಹೆಚ್ಚಲು ವಿಟಮಿನ್‌ ಇ ಕ್ಯಾಪ್ಸೂಲ್‌ ಬಳಸುವುದು ಸಹಜ. ಆದರೆ ಕೆಲವರು ಇದನ್ನು ಬಳಸುವಾಗ ಸರಿಯಾದ ಕ್ರಮ ಅನುಸರಿಸುವುದಿಲ್ಲ. 

ಮುಖದ ಅಂದ ಹೆಚ್ಚಲು ವಿಟಮಿನ್‌ ಇ ಕ್ಯಾಪ್ಸೂಲ್‌ ಬಳಕೆಯ ಸರಿಯಾದ ವಿಧಾನ, ಇದರಿಂದ ಚರ್ಮಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡಿ. 

ವಿಟಮಿನ್‌ ಇ ಮಾತ್ರೆಗಳಲ್ಲಿರುವ ಆಂಟಿಆಕ್ಸಿಡೆಂಟ್‌ ಅಂಶಗಳು ಚರ್ಮದ ರಂಧ್ರವನ್ನು ತೆರೆಯಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಚರ್ಮವನ್ನು ಒಳಗಿನಿಂದಲೇ ಸ್ವಚ್ಛ ಮಾಡುತ್ತದೆ. 

ವಿಟಮಿನ್‌ ಇ ಮಾತ್ರೆಯನ್ನು ತ್ವಚೆಗೆ ಅನ್ವಯಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.

ಆದರೆ ಇದರಿಂದ ಕೆಲವು ಅನಾನುಕೂಲಗಳೂ ಇವೆ. ಇದನ್ನು ಅತಿಯಾಗಿ ಬಳಸುವುದರಿಂದ ತ್ವಚೆಗೆ ತೊಂದರೆ ತಪ್ಪಿದ್ದಲ್ಲ. 

ವಿಟಮಿನ್‌ ಇ ಮಾತ್ರೆಯಿಂದ ಚರ್ಮಕ್ಕೆ ಉಂಟಾಗುವ ತೊಂದರೆ ತಪ್ಪಿಸಲು ಇದನ್ನು ಹೇಗೆ, ಎಷ್ಟು ಬಾರಿ ಬಳಸಬೇಕು ನೋಡಿ. 

ವಾರದಲ್ಲಿ ಎರಡರಿಂದ ಮೂರು ಬಾರಿ ವಿಟಮಿನ್‌ ಇ ಬಳಸುವುದರಿಂದ ತ್ವಚೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. 

ರಾತ್ರಿ ಮಲಗುವ ಮುನ್ನ ವಿಟಮಿನ್‌ ಇಯನ್ನು ಮುಖಕ್ಕೆ ಹಚ್ಚಿಕೊಂಡು ರಾತ್ರಿಯಿಡೀ ಹಾಗೇ ಬಿಡಬೇಕು. ಇದರಿಂದ ತ್ವಚೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. 

ವಿಟಮಿನ್‌ ಇ ಮಾತ್ರೆಯಿಂದ ಎಣ್ಣೆಯಂಶವನ್ನು ಹೊರ ತೆಗೆದು ಅದನ್ನು ನೇರವಾಗಿ ಮುಖಕ್ಕೆ ಹಚ್ಚಬಹುದು. ಆದರೆ ಅತಿಯಾಗಿ ಹಚ್ಚುವುದರಿಂದದ ಅಲರ್ಜಿ ಉಂಟಾಗಬಹುದು. 

ವಿಟಮಿನ್‌ ಇಯನ್ನು ತೆಂಗಿನೆಣ್ಣೆ, ಜೊಜೊಬಾ ಎಣ್ಣೆ, ಆಲಿವ್‌ ಎಣ್ಣೆ, ಆಲೊವೆರಾ, ರೋಸ್‌ವಾಟರ್‌, ನಿಂಬೆರಸದ ಜೊತೆಗೆ ಮಿಶ್ರಣ ಮಾಡಿ ಮುಖದ ಚರ್ಮಕ್ಕೆ ಹಚ್ಚಿಕೊಳ್ಳಬಹುದು. 

ವಿಟಮಿನ್‌ ಇಯನ್ನು ಅತಿಯಾಗಿ ಬಳಸುವುದರಿಂದ ಮುಖದ ಚರ್ಮದ ಮೇಲೆ ತುರಿಕೆ, ಅಲರ್ಜಿ, ಸುಡುವ ಅನುಭವ, ಕೆಂಪು ದದ್ದುಗಳು ಉಂಟಾಗುವುದು ಮುಂತಾದ ಸಮಸ್ಯೆಗಳು ಎದುರಾಗಬಹುದು. 

ಸೂಕ್ಷ್ಮ ಚರ್ಮ ಇರುವವರು ವಿಟಮಿನ್‌ ಇಯನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಬಾರದು. 

ಬೇಸಿಗೆಯಲ್ಲಿ ಬೆವರು, ಧೂಳಿನ ಕಾರಣದಿಂದ ಕೂದಲು ಅಂದಗೆಟ್ಟಿದ್ದರೆ ಈ ಹೇರ್‌ಪ್ಯಾಕ್‌ ಬಳಸಿ ನೋಡಿ