ಬೆಣ್ಣೆಯಂತೆ ಮೃದುವಾದ ತ್ವಚೆ ನಿಮ್ಮದಾಗಲು ಬಳಸಿ ಒಣದ್ರಾಕ್ಷಿ ಫೇಸ್‌ಪ್ಯಾಕ್‌ 

By Reshma
Jun 24, 2024

Hindustan Times
Kannada

ಸ್ವಚ್ಛವಾಗಿ, ಬೆಣ್ಣೆಯಂತೆ ಮೃದುವಾಗಿರುವ ಚರ್ಮ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಇದನ್ನು ಉಳಿಸಿಕೊಳ್ಳುವುದು ಖಂಡಿತ ಸುಲಭವಲ್ಲ. 

ಕೆಲವರಿಗೆ ಸೋಮಾರಿತನ, ಕೆಲಸದ ಒತ್ತಡದ ಕಾರಣದಿಂದ ತ್ವಚೆಯ ಆರೈಕೆಯ ಮೇಲೆ ಗಮನ ಹರಿಸುವುದು ಕಷ್ಟವಾಗುತ್ತದೆ. ಅಂಥವರು ತ್ವಚೆ ಮೃದುವಾಗಲು ಈ ಫೇಸ್‌ಪ್ಯಾಕ್‌ ಬಳಸಬೇಕು. 

ಒಣದ್ರಾಕ್ಷಿ ಬಹುತೇಕ ಎಲ್ಲರೂ ಮನೆಯಲ್ಲೂ ಸಿಗುತ್ತದೆ. ಇದನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಾತ್ರವಲ್ಲ ಇದು ಅಂದ ಹೆಚ್ಚಲು ಸಹಕಾರಿ. 

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಣದ್ರಾಕ್ಷಿ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ಫೇಸ್‌ಪ್ಯಾಕ್‌ ತಯಾರಿಸಿ ಮುಖಕ್ಕೆ ಹಚ್ಚಬಹುದು. 

ರಾತ್ರಿ ನೀರಿನಲ್ಲಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ರುಬ್ಬಿ, ಒರಟಾದ ಫೇಸ್‌ಪ್ಯಾಕ್‌ ತಯಾರಿಸಿ. 

ಈ ಪ್ಯಾಕ್‌ಗೆ ಸ್ವಲ್ಪ ಜೇನುತುಪ್ಪ ಹಾಗೂ ಹಾಲು ಸೇರಿಸಿ. ಈ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆಯಿರಿ. 

ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಫೇಸ್‌ಪ್ಯಾಕ್‌ ಬಳಸಬಹುದು. ಇದನ್ನು ಬಳಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ತ್ವಚೆ ಮೊದಲಿಗಿಂತ ಮೃದುವಾಗಿ ಹೊಳೆಯಲು ಆರಂಭಿಸುತ್ತದೆ. 

ಮುಖಕ್ಕೆ ಈ ಫೇಸ್‌ಪ್ಯಾಕ್‌ ಬಳಸುವ ಮುನ್ನ ಪ್ಯಾಚ್‌ ಪರೀಕ್ಷೆ ಮಾಡಿಸಿ. ನಿಮಗೆ ಅಲರ್ಜಿ ಅಥವಾ ಯಾವುದೇ ಚರ್ಮ ಸಮಸ್ಯೆ ಇದ್ದರೆ ಇದನ್ನು ಬಳಸಬೇಡಿ. 

ತೂಕ ಇಳಿಯೋಕೆ ಹೇಳಿ ಮಾಡಿಸಿದ ಹಣ್ಣಿದು 

Pexels